ಮೈಸೂರು: ‘ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್)ದ ವ್ಯಾಪ್ತಿಯಲ್ಲಿ ಮಾರಲಾಗುತ್ತಿರುವ ‘ನಂದಿನಿ’ ಹಾಲು, ಮೊಸರು, ಲಸ್ಸಿ, ಮಸಾಲ ಮಜ್ಜಿಗೆ ಉತ್ಪನ್ನಗಳ ಗರಿಷ್ಠ ಮಾರಾಟ ದರ(ಎಂಆರ್ಪಿ)ವನ್ನು ಕರ್ನಾಟಕ ಹಾಲು ಮಹಾಮಂಡಳದ ಆದೇಶದಂತೆ ಪರಿಷ್ಕರಿಸಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ವಿಜಯ್ಕುಮಾರ್ ತಿಳಿಸಿದ್ದಾರೆ.

‘ಗುರುವಾರದಿಂದಲೇ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಹಾಲು ಮತ್ತು ಮೊಸರಿಗೆ ಪ್ರತಿ ಲೀಟರ್/ಕೆ.ಜಿ.ಗೆ ₹ 2 ದರ ಹೆಚ್ಚಿಸಲಾಗಿದೆ. ಮೊಸರು, ಲಸ್ಸಿ, ಮಸಾಲ ಮಜ್ಜಿಗೆ ಉತ್ಪನ್ನಗಳ ಪ್ಯಾಕೆಟ್ಗಳ ಮೇಲೆ ಹಳೆಯ ಮಾರಾಟ ದರವೇ ಮುದ್ರಣಗೊಂಡಿದ್ದು, ಪರಿಷ್ಕೃತ ದರಗಳನ್ನು ಗ್ರಾಹಕರು ನೀಡಬೇಕಾಗುತ್ತದೆ. ದಾಸ್ತಾನು ಮುಗಿಯುವವರೆಗೆ ಹಳೆಯ ದರದ ಪ್ಯಾಕೆಟ್ಗಳನ್ನೇ ಮಾರುಕಟ್ಟೆಗೆ ಪೂರೈಸಲಾಗುವುದು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪರಿಷ್ಕರಣೆ ವಿವರ

ಪರಿಣಾಮ;ಹಳೆಯ ಎಂಆರ್ಪಿ; ಪರಿಷ್ಕೃತ ದರ (₹ ಗಳಲ್ಲಿ)

ಮೊಸರು 200 ಗ್ರಾಂ;10.50; 11.00

ಮೊಸರು 500 ಗ್ರಾಂ;23.50; 24.00

ಮೊಸರು 1 ಕೆ.ಜಿ.;45.00; 47.00

ಲಸ್ಸಿ 200 ಎಂ.ಎಲ್.;10.50; 12.00

ಮಸಾಲ ಮಜ್ಜಿಗೆ 200 ಎಂ.ಎಲ್.;7.50; milk p8.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.