ಮೈಸೂರು: ಇಲ್ಲಿನ ಎನ್.ಆರ್.ಮೊಹಲ್ಲಾದ ನಾರ್ತ್‌ಈಸ್ಟ್‌ನಲ್ಲಿ ಬುಧವಾರ ಸಂಜೆ ಮಹಿಳೆಯೊಬ್ಬರ ಕುತ್ತಿಗೆಯಿಂದ ಕಳ್ಳರು ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸುಧಾ (60) ಎಂಬುವರು ತಮ್ಮ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರ ಪೈಕಿ ಒಬ್ಬಾತ 20 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಅಜರುದ್ದೀನ್ ನೇತೃತ್ವದ ತಂಡವು ಕಳ್ಳರ ಶೋಧ ಕಾರ್ಯಾಚರಣೆ ನಡೆಸಿತು.

ಮುಂದುವರಿದ ರೌಡಿಗಳ ಪರೇಡ್: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸರು ನಡೆಸುತ್ತಿರುವ ರೌಡಿಗಳ ಪರೇಡ್ ನಗರದಲ್ಲಿ ಬುಧವಾರವೂ ಮುಂದುವರಿದಿದೆ.

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದೇವರಾಜ ವಿಭಾಗದ ಪೊಲೀಸರು 151 ಮಂದಿ ರೌಡಿಗಳು ಹಾಗೂ ಇತರ ಹಳೆಯ ಆರೋಪಿಗಳಿಗೆ, ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರ ನೇತೃತ್ವದಲ್ಲಿ ನಗರ ಕೇಂದ್ರ ಕಾರಾಗೃಹದ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಜತೆಗೆ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಆವರಣದಲ್ಲಿ ಕೃಷ್ಣರಾಜ ವಿಭಾಗದ ರೌಡಿಗಳನ್ನು ಪರೇಡ್ ನಡೆಸಿ ಎಸಿಪಿ ಪೂರ್ಣಚಂದ್ರ ತೇಜಸ್ವಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.