ಹುಣಸೂರು: ‘ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಆರೋಪಿಗಳಾದ ರಾಜು ಮತ್ತು ಕುಂಜಮ್ಮ ಎಂಬುವವರಿಗೆ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿ ಬುಧವಾರ ಆದೇಶಿಸಿದೆ’ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಅರ್ಚನ ಪ್ರಸಾದ್ ತಿಳಿಸಿದ್ದಾರೆ.

ಪ್ರಕರಣದ ವಿವರ: ಹುಣಸೂರು ತಾಲ್ಲೂಕಿನ ಬಿ.ಆರ್.ಕಾವಲ್ ಗ್ರಾಮದ ಸರ್ವೆ ನಂ.40ರಲ್ಲಿನ 4 ಎಕರೆ ಕೃಷಿ ಭೂಮಿಯನ್ನು ಮಾಲೀಕ ಡೋಮಾನಿಕ್ ಎಂಬುವವರು 1994ರಲ್ಲಿ ಸರ್ಕಾರದಿಂದ ಸಾಗುವಳಿ ಪಡೆದು ವ್ಯವಸಾಯ ನಡೆಸಿದ್ದರು. ಈ ಮಧ್ಯೆ ಕೆಲವು ಕಾರಣದಿಂದಾಗಿ ಇವರು ಬಾಲನಾಗಮ್ಮ ಎಂಬುವವರಿಗೆ ಮಾರಾಟ ಮಾಡಿದ್ದು, ಕೃಷಿ ಭೂಮಿ ನೋಡಿಕೊಳ್ಳಲು ಬಾಲನಾಗಮ್ಮ ರಾಜು ಮತ್ತು ಕುಂಜಮ್ಮ ಎಂಬುವವರನ್ನು ಕಾವಲುಗಾರರನ್ನಾಗಿ ನೇಮಿಸಿದ್ದರು.

ಈ ಮಧ್ಯೆ ರಾಜು ತನ್ನ ಹೆಸರನ್ನು ಡೋಮಾನಿಕ್ ಬಿನ್ ಸಬಾಸ್ಟಿನ್ ಎಂದು ಬದಲಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿಕೊಂಡು 2010ರಲ್ಲಿ ಈ ಭೂಮಿಯನ್ನು ಕೆಂಪಮ್ಮ ಎಂಬುವವರಿಗೆ ಮಾರಾಟ ಮಾಡಿ ನೋಂದಣಿ ಮಾಡಿಸಿದ್ದರು.

ವಿಷಯ ತಿಳಿದ ಭೂ ಮಾಲೀಕರಾದ ಬಾಲನಾಗಮ್ಮ, ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ವರದಿಯನ್ನು ಸರ್ಕಲ್ ಇನ್ ಸ್ಪೆಕ್ಟರ್ ದೇವೇಂದ್ರ ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶಿರಿನ್ ಜಾವಿದ್ ಅನ್ಸಾರಿ, ಆರೋಪಿಗಳಾದ ರಾಜು ಮತ್ತು ಕುಂಜಮ್ಮ ಅವರಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.