ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಕ್ರೀಡಾಕೂಟ | ಈಜು: ಮಣಿಕಂಠ, ನೈಶಾ ಚಾಂಪಿಯನ್ಸ್‌

Published : 5 ಅಕ್ಟೋಬರ್ 2024, 23:23 IST
Last Updated : 5 ಅಕ್ಟೋಬರ್ 2024, 23:23 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿ ನಡೆದಿರುವ ಸಿ.ಎಂ. ದಸರಾ ಕ್ರೀಡಾಕೂಟದ ಈಜು ವಿಭಾಗದಲ್ಲಿ ದಾವಣಗೆರೆಯ ಎಲ್. ಮಣಿಕಂಠ ಹಾಗೂ ಬೆಂಗಳೂರಿನ ನೈಶಾ ಶೆಟ್ಟಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ವೈಯಕ್ತಿಕ ಪ್ರಶಸ್ತಿ ಎತ್ತಿ ಹಿಡಿದರು.

ಮಣಿಕಂಠ ಒಟ್ಟು 4 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನೊಂದಿಗೆ ಒಟ್ಟು 24 ಅಂಕ ಸಂಪಾದಿಸಿ ಚಾಂಪಿಯನ್‌ ಆದರೆ, ನೈಶಾ 4 ಚಿನ್ನದೊಂದಿಗೆ 20 ಅಂಕ ಗಳಿಸಿ ಟ್ರೋಫಿ ಪಡೆದರು.

ಫಲಿತಾಂಶ:
ಪುರುಷರು:
100 ಮೀ. ಫ್ರೀಸ್ಟೈಲ್‌: ಎನ್. ಧೋನಿಶ್ ( ಬೆಂಗಳೂರು. ಕಾಲ: 56.12 ಸೆಕೆಂಡ್‌)–1, ದರ್ಶನ್ ( ಬೆಂಗಳೂರು)–2, ಚಿನ್ಮಯ್‌ ಬಾಗೇವಾಡಿ ( ಬೆಳಗಾವಿ)–3; 200 ಮೀ ಫ್ರೀಸ್ಟೈಲ್‌: ಎನ್. ಧೋನಿಶ್ ( ಬೆಂಗಳೂರು. ಕಾಲ; 2ನಿಮಿಷ, 03.35 ಸೆಕೆಂಡ್)–1, ಎಲ್. ಮಣಿಕಂಠ ( ದಾವಣಗೆರೆ)–2, ದರ್ಶನ್‌ ( ಬೆಂಗಳೂರು)–3; 200 ಮೀ ಬ್ರೆಸ್ಟ್ ಸ್ಟ್ರೋಕ್‌: ಎಲ್. ಮಣಿಕಂಠ ( ದಾವಣಗೆರೆ: 2ನಿಮಿಷ, ಸ್ಮರಣ್ ಮಂಗಳೂರಕರ್‌ ( ಬೆಳಗಾವಿ)–2, ಎಚ್‌.ಕೆ. ರತನ್‌ ಗೌಡ (ಹಾಸನ)–3; 100 ಮೀ. ಬ್ಯಾಕ್‌ಸ್ಟ್ರೋಕ್‌: ವಫಿ ಅಬ್ದುಲ್ ಹಕೀಂ ( ದಕ್ಷಿಣ ಕನ್ನಡ. ಕಾಲ: 1ನಿಮಿಷ, 7.03 ಸೆಕೆಂಡ್‌)–1, ಉಜ್ವಲ್‌ ರೆಡ್ಡಿ ( ಬೆಂಗಳೂರು) ಧವಳ್ ಹನುಮಣ್ಣನವರ್ ( ಬೆಳಗಾವಿ): 4X100 ಫ್ರೀಸ್ಟೈಲ್ ರಿಲೇ: ಬೆಂಗಳೂರು ನಗರ ( ಕಾಲ: 3ನಿಮಿಷ, 53.81 ಸೆಕೆಂಡ್‌)–1, ಬೆಳಗಾವಿ–2, ಮೈಸೂರು–3.

ಮಹಿಳೆಯರು:
100 ಮೀ. ಫ್ರೀಸ್ಟೈಲ್‌: ನೈಶಾ ಶೆಟ್ಟಿ (ಬೆಂಗಳೂರು: 1ನಿಮಿಷ, 03.08 ಸೆಕೆಂಡ್‌)–1, ಎಂ.ವಿ. ರಿಷಿಕಾ ( ಬೆಂಗಳೂರು)–2, ಲಿಪಿಕಾ ದೇವ್ ( ಚಿಕ್ಕಬಳ್ಳಾಪುರ)–3; 200 ಮೀ. ಫ್ರೀಸ್ಟೈಲ್‌; ಶಮನ್ವಿ ಗೌಡ ( ಬೆಂಗಳೂರು. ಕಾಲ: 2ನಿಮಿಷ, 18.48 ಸೆಕೆಂಡ್‌)–1, ಎಂ.ವಿ. ರಿಷಿಕಾ ( ಬೆಂಗಳೂರು)–2, ಲಿಪಿಕಾ ದೇವ್ ( ಚಿಕ್ಕಬಳ್ಳಾಪುರ)–3; 200 ಮೀ. ಬ್ರೆಸ್ಟ್ ಸ್ಟ್ರೋಕ್: ವಿ. ಹಿತೈಷಿ ( ಬೆಂಗಳೂರು. ಕಾಲ: 2 ನಿಮಿಷ, 58 ಸೆಕೆಂಡ್)–1, ಎಂ.ವಿ. ರಿಷಿಕಾ ( ಬೆಂಗಳೂರು)–2, ಸಮಿಯಾ ( ಬೆಳಗಾವಿ)–3; 100 ಮೀ. ಬ್ಯಾಕ್‌ಸ್ಟ್ರೋಕ್‌: ನೈಶಾ ಶೆಟ್ಟಿ ( ಬೆಂಗಳೂರು: ಕಾಲ: 1ನಿಮಿಷ, 11.11 ಸೆಕೆಂಡ್‌), ವಿ. ಪ್ರೀತಾ ( ಬೆಂಗಳೂರು)–2, ಭೂಮಿ ಭಾಗವತ್‌ ( ಧಾರವಾಡ)–3; 4X100 ಫ್ರೀಸ್ಟೈಲ್ ರಿಲೇ: ಬೆಂಗಳೂರು ( 4ನಿಮಿಷ, 35.16 ಸೆಕೆಂಡ್‌), ಬೆಳಗಾವಿ–2, ಬೆಂಗಳೂರು ಗ್ರಾಮೀಣ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT