ಮೈಸೂರು: ಸಹಕಾರ ಸಂಘಗಳ ಸದಸ್ಯರು ಮತ್ತು ಕುಟುಂಬದವರಿಗೆ ಯಶಸ್ವಿನಿ ಆರೋಗ್ಯ ಸೌಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ಹೇಳಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸೋಮವಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸರ್ಕಾರ ಈ ವರ್ಷ ಮರು ಜಾರಿಮಾಡಿದೆ. ಜೆಎಸ್ಎಸ್ ಆಸ್ಪತ್ರೆಯಲ್ಲೂ ಈ ಯೋಜನೆ ಪುನರಾರಂಭಿಸಲಾಗುತ್ತಿದೆ. ಈ ಹಿಂದೆ ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆ ಸೌಲಭ್ಯ ಮಾತ್ರ ದೊರೆಯುತ್ತಿತ್ತು. ಈಗ ಸಾಮಾನ್ಯ ವೈದ್ಯಕೀಯ ಸೇವೆಯು ಪಡೆಯಬಹುದಾಗಿದ್ದು, ಬಡ ರೋಗಿಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ‘ಜೆಎಸ್ಎಸ್ ಆಸ್ಪತ್ರೆಯಲ್ಲಿ ಯಶಸ್ವಿನಿ ಮಾತ್ರವಲ್ಲದೇ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಇಎಸ್ಐ, ಜ್ಯೋತಿ ಸಂಜೀವಿನಿ, ಖಾಸಗಿ ಆರೋಗ್ಯ ವಿಮೆ ಸೌಲಭ್ಯಗಳಡಿ ಚಿಕಿತ್ಸೆ ಪಡೆಯಬಹುದು. ಯಶಸ್ವಿನಿ ಯೋಜನೆಯಡಿ ಈ ಹಿಂದೆ ರೋಗಿಗಳಿಗೆ ಸಾಮಾನ್ಯ ವಾರ್ಡ್ ಮಾತ್ರ ನೀಡಲಾಗುತ್ತಿತ್ತು. ಇದೀಗ ಹೆಚ್ಚುವರಿ ಹಣ ಪಾವತಿಸಿ ವಿಶೇಷ ವಾರ್ಡ್ಗಳ ಸೌಲಭ್ಯ ಕೂಡ ಪಡೆಯಬಹುದು’ ಎಂದು ತಿಳಿಸಿದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗ ನಿರ್ದೇಶಕ ಪುಟ್ಟಸುಬ್ಬಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಮಧು, ಮುಖ್ಯ ಹಣಕಾಸು ಅಧಿಕಾರಿ ಕೆ.ಎಂ.ಭಗವಾನ್, ಉಪನಿರ್ದೇಶಕ ಡಾ.ಶ್ಯಾಮಪ್ರಸಾದ್ ಶೆಟ್ಟಿ, ಭಾನುಮೂರ್ತಿ, ಯಶಸ್ವಿನಿ ಸಂಯೋಜಕ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.