ಮೈಸೂರು: ನಗರದ ಸ್ವರಸಂಕುಲ ಸಂಗೀತ ಸಭಾ ಹಾಗೂ ಕನ್ನಡಿ ಕ್ರಿಯೇಷನ್ಸ್ನಿಂದ ಇಲ್ಲಿನ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಪಂಡಿತ್ ಇಂದೂಧರ ನಿರೋಡಿ ಮತ್ತು ಉದ್ಯಮಿ ಜಗನ್ನಾಥ ಶೆಣೈ ಕುರಿತ ಸಾಕ್ಷ್ಯಚಿತ್ರಗಳ ಬಿಡುಗಡೆ ನಡೆಯಿತು.

ಜಯರಾಮ್ ಪಾಟೀಲ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ‘ಈ ರೀತಿಯ ಸಾಕ್ಷ್ಯಚಿತ್ರಗಳು ಯುವ ಪೀಳಿಗೆಗೆ ಸ್ಫೂರ್ತಿ ತುಂಬುತ್ತವೆ. ಸರ್ಕಾರಿ ವ್ಯವಸ್ಥೆಯಲ್ಲಿ ನಿರ್ಮಾಣವಾಗುವ ಸಾಕ್ಷ್ಯಚಿತ್ರಗಳು ಜನರನ್ನು ಮುಟ್ಟದೆ ಕಪಾಟುಗಳಲ್ಲೇ ಕೊಳೆಯುತ್ತಿವೆ. ಸ್ವರಸಂಕುಲದಂಥ ಸಂಸ್ಥೆ ಮಾಡುತ್ತಿರುವ ಕೆಲಸ ಮೆಚ್ಚುವಂತದ್ದು’ ಎಂದರು.

ಪುಣೆಯ ಪಂಡಿತ್ ನಿಷಾದ್ ಬಾಕ್ರೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು.

ಉದ್ಯಮಿ ಜಗನ್ನಾಥ ಶೆಣೈ ಮತ್ತು ಲಕ್ಷ್ಮೀನಾರಾಯಣ್ (ಬಾಬು), ಡಾ.ಎಂ.ಸಿ.ಮನೋಹರ, ಪಂಡಿತ್ ವೀರಭದ್ರಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.