ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಸ್ಪಂದನ ಕಾರ್ಯಕ್ರಮ: ಸಿಎಂ ಆದೇಶಕ್ಕೆ ತವರಲ್ಲೇ ಸಿಗದ ಕಿಮ್ಮತ್ತು!

Published : 1 ಜುಲೈ 2024, 7:46 IST
Last Updated : 1 ಜುಲೈ 2024, 7:46 IST
ಫಾಲೋ ಮಾಡಿ
Comments
ಎಚ್‌.ಡಿ.ಕೋಟೆ, ಸರಗೂರು, ಸಾಲಿಗ್ರಾಮ, ಕೆ.ಆರ್.ನಗರದಲ್ಲಿ ನಡೆಯಬೇಕಿತ್ತು ಹಲವು ಕುಂದುಕೊರತೆ ಎದುರಿಸುತ್ತಿರುವ ಜನರು ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು ಸಿಎಂ ಸೂಚಿಸಿದ್ದರು
ಜುಲೈ ಮೊದಲ ವಾರದಲ್ಲಿ ಎಲ್ಲ ತಾಲ್ಲೂಕುಗಳಲ್ಲೂ ಜನಸ್ಪಂದನ ಕಾರ್ಯಕ್ರಮ ಪೂರ್ಣಗೊಳಿಸಲಾಗುವುದು
ಡಾ.ಕೆ.ವಿ.ರಾಜೇಂದ್ರ ಜಿಲ್ಲಾಧಿಕಾರಿ
ಹಲವು ಸಮಸ್ಯೆಗಳು...
ಸಾಕಷ್ಟು ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ಹಾಲಿನ ಪ್ರೋತ್ಸಾಹಧನ ದೊರೆತಿಲ್ಲ. ಮುಂಗಾರು ಪೂರ್ವ ಮಳೆಯಿಂದ ಹಾನಿಗೀಡಾದ ಬೆಳೆಗೆ ಪರಿಹಾರ ನೀಡಿಲ್ಲ. ಮನೆ ದುರಸ್ತಿ–ನಿರ್ಮಾಣಕ್ಕೆ ಆರ್ಥಿಕ ನೆರವು ಸಿಕ್ಕಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷ ನಿಂತಿಲ್ಲ. ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾಗುವುದು ಕೊನೆಯಾಗಿಲ್ಲ. ಇದೆಲ್ಲವನ್ನೂ ಹೇಳಿಕೊಳ್ಳಲು ರೈತರು ಕಾದಿದ್ದಾರೆ. ಇದಲ್ಲದೇ ಖಾತೆ ಕಂದಾಯ ಮೂಲಸೌಲಭ್ಯ ಕೊರತೆ ಹೀಗೆ... ಹಲವು ವೈಯಕ್ತಿಕ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಅಹವಾಲು ಸಲ್ಲಿಸಲು ಕಾಯುತ್ತಿದ್ದಾರೆ.
ಈವರೆಗೆ 4 ತಾಲ್ಲೂಕಿನಲ್ಲಿ ಆಗಬೇಕಿತ್ತು
ಜಿಲ್ಲಾಡಳಿತ ನೀಡಿದ್ದ ವೇಳಾಪಟ್ಟಿ ಪ್ರಕಾರ ಎಚ್.ಡಿ. ಕೋಟೆಯ ಅಂಬೇಡ್ಕರ್‌ ಭವನದಲ್ಲಿ 27ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಸರಗೂರು ವ್ಯಾಪ್ತಿಯ ಜನರ ಅಹವಾಲು ಆಲಿಸಬೇಕಿತ್ತು. ಅಂತೆಯೇ ಜೂನ್‌ 29ರಂದು ಕೆ.ಆರ್. ನಗರ ತಾಲ್ಲೂಕಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಸಾಲಿಗ್ರಾಮದ ವ್ಯಾಪ್ತಿಯ ಜನರ ಅಹವಾಲು ಆಲಿಸಲಾಗುವುದು ಎಂದು ತಿಳಿಸಲಾಗಿತ್ತು. ಇದರೊಂದಿಗೆ 5 ತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಬೇಕಾಗಿತ್ತು. ಆದರೆ ಆಗಿರುವುದು ಮೈಸೂರು ತಾಲ್ಲೂಕಿನಲ್ಲಿ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT