ಕೆ.ಆರ್.ನಗರ: ಇಲ್ಲಿನ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ.ಸಿ.ಅರವಿಂದ್ರ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಯ ಮನವೊಲಿಸಿ ಒಂದು ಮಾಡಲಾಯಿತು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ.ಸಿ.ಅರವಿಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, 3 ಮತ್ತು 7 ವರ್ಷಗಳಿಂದ ಬೇರೆ ವಾಸವಾಗಿದ್ದ ಎರಡು ಜೋಡಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಅವರ ಮನವೊಲಿಸಿ ಒಂದು ಮಾಡಲಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಚಾಮಲಾಪುರ ಗ್ರಾಮದ ವ್ಯಕ್ತಿಯೊಬ್ಬರ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಂದು ಪ್ರಕರಣ ಇತ್ಯರ್ಥಗೊಳಿಸಿ ವ್ಯಾಜ್ಯ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಈ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಒಂದು ಪ್ರಕರಣ ಸದ್ಯಕ್ಕೆ ಇಲ್ಲ ಎಂದು ಹೇಳಿದರು.

1974ರಲ್ಲಿ ಸುಮಾರು 50ವರ್ಷಗಳ ಹಿಂದೆ ಇಲ್ಲಿನ ನ್ಯಾಯಾಲಯದಲ್ಲಿ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ರತ್ಮಮ್ಮ ಎಂಬುವವರು ಗಂಗಾಧರಗೌಡ ಎಂಬುವವರ ಮೇಲೆ ವಿಭಾಗಕ್ಕಾಗಿ ಪ್ರಕರಣ ದಾಖಲಿಸಿದ್ದರು. ಅವರು ಹೈಕೋರ್ಟ್ ವರೆಗೆ ಹೋಗಿದ್ದರು. ಪ್ರಕರಣ ದಾಖಲು ಮಾಡಿದ ವ್ಯಕ್ತಿ ಕೂಡ ನಿಧನರಾಗಿದ್ದು, ಇಂದು ಅವರ ವಾರಸುದಾರರು ಪ್ರಕರಣ ಇತ್ಯರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ 72, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ 120 ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ 138, ಒಟ್ಟು 330 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಚಂದನ್, ವಕೀಲರಾದ ವಿ.ಪೂರ್ಣಿಮಾ ಗುರುಶಾಂತಪ್ಪ, ಜಗದೀಶ್, ಕೆ.ಪಿ.ಮಂಜುನಾಥ್, ಎಂ.ಸಿ.ಶಶಿಕಾಂತ್, ಅಂಕನಹಳ್ಳಿ ತಿಮ್ಮಪ್ಪ, ನಾಗರಾಜ್, ಜಯರಾಮೇಗೌಡ, ಡಿ.ಸಿ.ಗೋವಿಮದರಾಜು, ಜಿ.ಎಲ್.ಧರ್ಮ, ಪ್ರಭಾವತಿ, ಪರಮೇಶ್ವರ್ ಲೋಕ್ ಅದಾಲತ್‌ನಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.