ಮೈಸೂರು: ‘ಸ್ಯಾಂಟ್ರೊ ರವಿ ಬಿಜೆಪಿಯ ಉತ್ಪನ್ನ. ಬಿಜೆಪಿ ಸರ್ಕಾರ ತರಲು ಸಪ್ಲೈ ಗಿರಾಕಿಯಾಗಿ ಕೆಲಸ ಮಾಡಿದ್ದಾನೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಈತನ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ತಮ್ಮ ‘ಬಾಂಬೆ ಡೇಸ್’ ಪುಸ್ತಕದಲ್ಲಿ ಈತನ ಬಗ್ಗೆ ಬರೆದಿದ್ದೇನೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಹೇಳಿದ್ದಾರೆ. ಈತನ ಪಾತ್ರ ಏನು, ಈತನನ್ನು ಬಳಸಿಕೊಂಡು ಯಾರಾರ ಸಿಡಿ ಮಾಡಿದ್ದಾರೆ. ಇವೆಲ್ಲವೂ ತನಿಖೆಯಿಂದ ಹೊರಬರಬೇಕು’ ಎಂದು ಒತ್ತಾಯಿಸಿದರು.

‘ಸಂತ್ರಸ್ತ ಮಹಿಳೆ ಆತನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಬಿಜೆಪಿಯು 60 ಜನ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಸ್ಯಾಂಟ್ರೊ ರವಿ ಅಂಥವರ ಜೊತೆಗೇ ಆ ಪಕ್ಷದವರು ಹೆಚ್ಚು ಒಡನಾಟ ಇಟ್ಟುಕೊಂಡಿದ್ದಾರೆ’ ಎಂದು ದೂರಿದರು.

‘ನಿಜಕ್ಕೂ–ಬಿಜೆಪಿಯ ತತ್ವ–ಸಿದ್ಧಾಂತಕ್ಕೂ ಎಣ್ಣೆ– ಸೀಗೆಕಾಯಿ ಸಂಬಂಧ. ಆ ಪಕ್ಷದ ಯಾವ ನಾಯಕರು ಸತ್ಯ ಹೇಳುತ್ತಾರೆ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.