ಹುಣಸೂರು: ‘ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು 300ಕ್ಕೂ ಹೆಚ್ಚು ಪ್ರಭೇದಗಳಿಗೆ ಸೇರಿದ ಪಕ್ಷಿಗಳಿಗೆ ಆಶ್ರಯ ನೀಡಿದೆ’ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೇಳಿದರು.

ನಾಗರಹೊಳೆ ಅಭಯಾರಣ್ಯದ ವೀರನಹೊಸಹಳ್ಳಿ ವಲಯದಲ್ಲಿ ಕಳೆದ 3 ದಿನದಿಂದ ನಡೆದಿದ್ದ ಪಕ್ಷಿ ಸಮೀಕ್ಷೆ ಅಭಿಯಾನ ಭಾನುವಾರ ಅಂತ್ಯಗೊಂಡಿದ್ದು, ಅದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ನಾಗರಹೊಳೆ ಅರಣ್ಯದಲ್ಲಿ ಪಕ್ಷಿ ಸಮೀಕ್ಷೆ ನಡೆಸಲು ದೇಶದ 8 ರಾಜ್ಯ ಗಳಿಂದ ಪಕ್ಷಿ ಪ್ರಿಯರು ಆಗಮಿಸಿದ್ದು, ಇವರಲ್ಲಿ ಅನೇಕರಿಗೆ ಬೇರೆಲ್ಲೂ ಸಿಗದ ಅಪರೂಪದ ಪಕ್ಷಿಗಳು ಗೋಚರಿಸಿವೆ. ಉದ್ಯಾನವನ ಸರ್ವ ರೀತಿಯ ವನ್ಯಪ್ರಾಣಿ, ಪಕ್ಷಿಗಳ ವಂಶಾಭಿವೃದ್ಧಿಗೆ ಪೂರಕವಾಗಿದೆ’ ಎಂದರು.

‘ನಾಗರಹೊಳೆ ಅಭಯಾರಣ್ಯದ ಅಭಿವೃದ್ಧಿಗೆ ಅರಣ್ಯದಂಚಿನ ಗ್ರಾಮಸ್ಥರ ಕೊಡುಗೆ ಅನನ್ಯ. ವನ್ಯಮೃಗಗಳ ದಾಳಿಗೆ ಬೆಳೆ ಮತ್ತು ಜೀವಹಾನಿ ಆದರೂ ಸ್ಥಳೀಯರು ಅರಣ್ಯ ಇಲಾಖೆಯೊಂದಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ದಾಂಡೇಲಿ ಅರಣ್ಯದಲ್ಲಿ ಗೋಚರಿ ಸುವ ಹಾರ್ನ್ ಬಿಲ್ (ಕೊಂಬಿನ ಹಕ್ಕಿ) ಅಳಿವಿನಂಚಿನಲ್ಲಿದ್ದು, ಈ ಪಕ್ಷಿ ಸಂರಕ್ಷಣೆಗೆ ಇಲಾಖೆ ಆದ್ಯತೆ ನೀಡಿದೆ. ಹುಲಿ ಸಂರಕ್ಷಣೆ ಕಾಯ್ದೆಯಡಿಯಲ್ಲೇ ಈ ಪಕ್ಷಿಯನ್ನು ಸೇರಿಸಿದ್ದು, ಅಕ್ರಮ ಬೇಟೆ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಹುಲಿ ಯೋಜನಾ ನಿರ್ದೇಶಕ ಮತ್ತು ಪಕ್ಷಿ ಸಮೀಕ್ಷೆ ಅಭಿಯಾನದ ರೂವಾರಿ ಹರ್ಷಕುಮಾರ್ ಮಾತನಾಡಿ, ‘ಈ ಸಮೀಕ್ಷೆಗೆ 700 ಸ್ವಯಂ ಸೇವಕರು ನೋಂದಣಿ ಮಾಡಿಸಿಕೊಂಡಿದ್ದು, 130 ಜನರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 118 ಸ್ವಯಂ ಸೇವಕರು ಭಾಗವಹಿಸಿದ್ದರು’ ಎಂದರು.

‘864 ಚದರ ಕಿ.ಮೀ. ವ್ಯಾಪ್ತಿಯ ನಾಗರಹೊಳೆಯನ್ನು 8 ವಲಯಗಳನ್ನಾಗಿ ವಿಭಾಗಿಸಿದ್ದು, 91 ಬೀಟ್‌ಗಳಲ್ಲಿ 118 ಸ್ವಯಂ ಸೇವಕರ ತಂಡ ರಚಿಸಿ ಇಲಾಖೆ ಸಿಬ್ಬಂದಿಯೊಂದಿಗೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ಈ ಸಮೀಕ್ಷೆಯಲ್ಲಿ 290 ಪ್ರಭೇದಕ್ಕೆ ಸೇರಿದ ಪಕ್ಷಿಗಳು ಗುರುತಿಸಿ ಇ–ಬರ್ಡ್ ಆ್ಯಪ್‌ನಲ್ಲಿ ದಾಖಲಿಸಲಾಗಿದೆ. ಕಳೆದ ಸಾಲಿನಲ್ಲಿ 260 ಪ್ರಭೇದಕ್ಕೆ ಸೇರಿದ ಪಕ್ಷಿಗಳು ದಾಖಲಾಗಿದ್ದವು’ ಎಂದು ಹೇಳಿದರು.

ಸ್ವಯಂ ಸೇವಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಸಿಎಫ್ ದಯಾನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.