ಮೈಸೂರು: ‘ವಿರೋಧ ಪಕ್ಷಗಳ ಪರಿಸ್ಥಿತಿಯು, ಆನೆ ನಡೆಯುವುದನ್ನೇ ನೋಡುತ್ತಾ ಕುಳಿತ ನರಿಯಂತಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು.

ವೀರನಹೊಸಹಳ್ಳಿಯಲ್ಲಿ ಬುಧ ವಾರ ‘ಗಜಪಯಣ’ಕ್ಕೆ ಚಾಲನೆ ನೀಡಿ ಮಾತನಾಡಿ, ‘ಆನೆ ನಡೆಯುವ ದಾರಿಯಲ್ಲಿ ಅದೇನೋ ಬೀಳುತ್ತದೆಂದು ನರಿ ಕಾಯುತ್ತಿರುತ್ತದೆ. ಆದರೆ, ಅದು ಬೀಳಲ್ಲ. ನರಿ ಅದನ್ನು ತಿನ್ನಲ್ಲ’ ಎಂದರು.

‘7 ಕೋಟಿ ಜನ ಮತ ಹಾಕಿ ಚುನಾಯಿ ಸಿದ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಅಸ್ಥಿರಗೊಳಿಸಲು ಹೇಗೆ ಸಾಧ್ಯ? ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಪ್ಪೇನಿದೆ’ ಎಂದು ಪ್ರಶ್ನಿಸಿದರು. ‘ಮುಡಾ ಪ್ರಕರಣ ದಸರೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಾರಿ ವಿಜೃಂಭಣೆಯಿಂದ ಆಚರಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.