ಮೈಸೂರು: ಪಿ.ಎಂ. ಸ್ವನಿಧಿ ಯೋಜನೆಯಲ್ಲಿ ಪತ್ರಿಕಾ ವಿತರಕರನ್ನು ಸೇರ್ಪಡೆಗೊಳಿಸಿದ್ದಕ್ಕೆ ಯೋಜನೆಯ ರಾಜ್ಯ ಸಂಚಾಲಕ ಎ.ರಾಮದಾಸ್ ಅವರಿಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಮಂಗಳವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ರಾಮದಾಸ್ ಮಾತನಾಡಿ, ಪತ್ರಿಕಾ ವಿತರಕರು, ಪ್ರತಿನಿಧಿಗಳು (ಏಜೆಂಟರು) ಹೇಗೆ ಲಾಭ ಪಡೆಯಬಹುದು ಎಂದು ತಿಳಿಸಿದರು. ಗ್ರಾಮೀಣ ವಿತರಕರೂ ಇದರ ಪ್ರಯೋಜನ ಪಡೆಯಬಹುದು ಎಂದರು.

ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ‘ಒಕ್ಕೂಟದ ಸದಸ್ಯತ್ವ ಪಡೆದ ರಾಜ್ಯದ ವಿತರಕರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್‌ನ ಜೆರಾಕ್ಸ್ ದಾಖಲಾತಿಗಳನ್ನು ಸೆ.14ರ ಒಳಗೆ ಜಿಲ್ಲಾ ಸಂಘಟನೆಗಳ ಮುಖಂಡರಿಗೆ ಅಥವಾ ಒಕ್ಕೂಟದ ವಿಳಾಸಕ್ಕೆ ಸಲ್ಲಿಸಬೇಕು’ ಎಂದರು.

‘ಅರ್ಜಿ ಸಲ್ಲಿಕೆ ವಿಳಾಸ: 8/9 ಮಹಾಲಕ್ಷ್ಮಿ ಪ್ಲಾಜ, ಮುನೇಶ್ವರ ಬ್ಲಾಕ್, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಎದುರು, ಸರಸ್ವತಿಪುರ ಮುಖ್ಯ ರಸ್ತೆ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು -560 096 ಹಾಗೂ ಮಾಹಿತಿಗೆ ಮೊ. 99725 34666 ಸಂಪರ್ಕಿಸಿ’ ಎಂದರು

ಒಕ್ಕೂಟದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೆಲುವರಾಜ್, ನಿರ್ದೇಶಕ ಎಚ್.ಪಿ.ಯೋಗೀಶ್ ಇದ್ದರು.

ಜಿಲ್ಲಾ ಸಂಘದಿಂದಲೂ ಅಭಿನಂದನೆ: ಕೇಂದ್ರ ಸರ್ಕಾರದ ಪಿ.ಎಂ. ಸ್ವನಿಧಿಯಿಂದ ಸಮ್ಮಾನ್‌ವರೆಗಿನ 9 ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಸಂಚಾಲಕರಾಗಿ ಆಯ್ಕೆಯಾಗಿರುವ ಎಸ್.ಎ.ರಾಮದಾಸ್ ಅವರಿಗೆ ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದಲೂ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಜೆ.ಎಸ್.ಹೋಮದೇವ ಮಾತನಾಡಿ, ‘ಪತ್ರಿಕಾ ವಿತರಕರ ಬಗ್ಗೆ ಚೆನ್ನಾಗಿ ಬಲ್ಲ ಹಾಗೂ ಹಲವು ಕಾರ್ಯಕ್ರಮಗಳಿಗೆ ಬೆಂಬಲ ನೀಡಿರುವ ರಾಮದಾಸ್ ಅವರು, ಸರ್ಕಾರದ ಸವಲತ್ತುಗಳನ್ನು ಕೂಡಿಸುವಲ್ಲಿ ಮುಂದೆಯೂ ಹೆಚ್ಚಿನ ಸಹಕಾರ ನೀಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.