ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ವಿತರಕರು
25 ವರ್ಷದಿಂದ ವಿತರಕನಾಗಿರುವೆ. ಪ್ರಜಾವಾಣಿ@75 ಅಂಗವಾಗಿ ಪತ್ರಿಕಾ ವಿತರಕರಿಗೆ ಆರೋಗ್ಯ ತಪಾಸಣೆ ಏರ್ಪಡಿಸಿರುವುದು ಶ್ಲಾಘನೀಯ. ಯಾವುದೇ ಗಿಫ್ಟ್ ಕೊಡುವುದಕ್ಕಿಂತಲೂ ಇದು ಉತ್ತಮ ಪ್ರಯತ್ನ. ವಿತರಕ ಸಮುದಾಯದ ಆರೋಗ್ಯ ರಕ್ಷಣೆಯತ್ತ ಪತ್ರಿಕೆ ಗಮನ ಹರಿಸಿದ್ದು ಸಂತೋಷ ತಂದಿದೆ
ರಾಜಶೇಖರ ಜೆ.ಎಸ್
ನಾವೇ ವೈಯಕ್ತಿಕವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರೆ ಸಾವಿರಾರು ರೂಪಾಯಿ ಬೇಕು. ಈಗ ಜಯದೇವ ಆಸ್ಪತ್ರೆಯಲ್ಲಿ ಉಚಿತವಾಗಿ ಶಿಬಿರ ಏರ್ಪಡಿಸರುವುದರಿಂದ ಖುಷಿಯಾಗಿದೆ. ಹೀಗಾಗಿ ಕೆಲಸ ಮುಗಿಸಿದ ಕೂಡಲೇ ಆಸ್ಪತ್ರೆಗೆ ಬಂದೆ. ಸಮಾಧಾನವಾಯಿತು.
ರೇವಣ್ಣ
ಪತ್ರಿಕಾ ವಿತರಕರ ಕ್ಷೇಮ ಕುಶಲದ ಬಗ್ಗೆ ಕಾಳಜಿ ವಹಿಸುವ ಇಂಥ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇದೇ ಮೊದಲ ಬಾರಿಗೆ ನಮಗಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ಸಂತೋಷ ಮೂಡಿಸಿದೆ. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಪತ್ರಿಕಾ ಸೇವೆಯೂ ನಿರಂತರವಾಗಿರುತ್ತದೆ
ಲಿಂಗರಾಜು
ನನ್ನ ತಂದೆ ಬಿಕೆಎಂ ನಂಜಪ್ಪ ಅವರೂ ವಿತರಕರಾಗಿದ್ದರು. ಈಗ ನಾನು ವಿತರಕನಾಗಿರುವೆ. ಜಯದೇವ ಆಸ್ಪತ್ರೆಯನ್ನು ನೋಡೇ ಇರಲಿಲ್ಲ. ಆರೋಗ್ಯ ತಪಾಸಣೆ ಏರ್ಪಡಿಸಿದ್ದರಿಂದ ಇಲ್ಲಿಗೆ ಬಂದೆ. ಹೃದಯದ ಆರೋಗ್ಯದ ಕುರಿತು ತಿಳಿವಳಿಕೆಯೂ ಮೂಡಿತು. ‘ಪ್ರಜಾವಾಣಿ‘ಗೆ ಧನ್ಯವಾದಗಳು