ಪ್ರಜಾವಾಣಿ ವಾರ್ತೆ

ಮೈಸೂರು: ಬಾಲಕಿಯನ್ನು ಪ್ರೀತಿಸಿ ಮದುವೆಯಾದ ಆರೋಪ ಸಾಬೀತಾದ ಕಾರಣ ಅಪರಾಧಿ ಜಫ್ರುಲ್ಲಾ ಎಂಬಾತನಿಗೆ ಫೋಕ್ಸೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಸಜೆ ಹಾಗೂ ₹1 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಕೆ.ಆರ್.ನಗರದ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಾಲಕಿಯನ್ನು ಪ್ರೀತಿಸಿದ್ದ ಜಫ್ರುಲ್ಲಾ, ಆಕೆ ಬಾಲಕಿ ಎಂಬುದು ತಿಳಿದ್ದರೂ 2021ರ ಮಾರ್ಚ್ 5ರಂದು ಕೆ.ಆರ್.ಪೇಟೆಗೆ ಕರೆದೊಯ್ದು, ಅಲ್ಲಿಂದ ರಾಜಸ್ಥಾನಕ್ಕೆ ತೆರಳಿ ಬಾಲ್ಯವಿವಾಹವಾಗಿದ್ದ. ನಂತರ ಕೆ.ಆರ್.ಪೇಟೆಗೆ ಕರೆತಂದು ಬಾಡಿಗೆ ಮನೆಯಲ್ಲಿ ವಾಸವಿದ್ದ.

ಕೆಲ ಸಮಯದ ಬಳಿಕ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅದು ಅನಾರೋಗ್ಯದಿಂದ ಸತ್ತಾಗ, ಶವವನ್ನು ಚಿಕ್ಕಮಗಳೂರು ಜಿಲ್ಲೆಯ ರಾಮನಹಳ್ಳಿಗೆ ಕೊಂಡೊಯ್ದು ಶವಸಂಸ್ಕಾರ ಮಾಡಿದ್ದ. ಈ ಬಗ್ಗೆ ತನಿಖೆ ನಡೆಸಿದ್ದ ಕೆ.ಆರ್.ನಗರ ಠಾಣೆಯ ಇನ್ಸ್ಪೆಕ್ಟರ್ ಎಂ.ಆರ್.ಲವ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಕೆ.ಬಿ.ಜಯಂತಿ ವಾದ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.