ಮೈಸೂರು: ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಆಳವನ್ನು ತಲುಪಲು ಯುವಜನತೆಯು ಉತ್ಸಾಹ ತೋರಬೇಕು’ ಎಂದು ರಂಗಕರ್ಮಿ ಜನಾರ್ಧನ್ (ಜನ್ನಿ) ಹೇಳಿದರು.

ನಗರದ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಗುರುವಾರ ನಡೆದ 69ನೇ ಕರ್ನಾಟಕ ರಾಜ್ಯೋತ್ಸವ ‘ಕನ್ನಡ ದರ್ಶನ’ ಉದ್ಘಾಟಿಸಿ ಮಾತನಾಡಿದರು.

‘ಕನ್ನಡದ ಪರಂಪರೆ ಮತ್ತು ಭಾಷೆಯ ಮಹತ್ವವನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು. ಭಾಷೆಯ ಅಭಿವೃದ್ಧಿಗೆ ಯುವಜನರ ಸಹಕಾರ ಅಗತ್ಯ’ ಎಂದರು.

ಮುಖ್ಯ ಅತಿಥಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಡೆದ ವೀರಗಾಸೆ ಕುಣಿತ, ಗಜ ಧ್ವಜಾರೋಹಣ, ಎತ್ತಿನಬಂಡಿಯ ಮೆರವಣಿಗೆ, ಸಾಂಪ್ರದಾಯಿಕ ನೃತ್ಯ ಮತ್ತು ವಿವಿಧ ರಾಜ್ಯಗಳ ದಿರಿಸಿನ ಫ್ಯಾಷನ್ ಶೋ ಗಮನ ಸೆಳೆಯಿತು.

ಸಂತ ಫಿಲೋಮಿನಾ ವಿದ್ಯಾಸಂಸ್ಥೆ ರೆಕ್ಟರ್ ಲೂರ್ದ್ ಪ್ರಸಾದ್ ಜೋಸೆಫ್ ಕಾಲೇಜು ಬುಲೆಟಿನ್ ಬಿಡುಗಡೆ ಮಾಡಿದರು. ಪ್ರಾಂಶುಪಾಲ ರವಿ ಜಿ.ಡಿ.ಸಾಲ್ಡಾನ್ಹಾ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಟಿ. ಸದೆಬೋಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.