ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜ್ಞಾ ಭಾಷೆ: ಅಂಚೆ ಕಾರ್ಡ್‌ ಬಿಡುಗಡೆ

ಆಯಿಷ್: ಅಂತರರಾಷ್ಟ್ರೀಯ ಸಂಜ್ಞಾ ಭಾಷಾ ದಿನಾಚರಣೆ
Published : 24 ಸೆಪ್ಟೆಂಬರ್ 2024, 4:11 IST
Last Updated : 24 ಸೆಪ್ಟೆಂಬರ್ 2024, 4:11 IST
ಫಾಲೋ ಮಾಡಿ
Comments

ಮೈಸೂರು: ಸಂಜ್ಞಾ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಅಂಚೆ ಇಲಾಖೆಯ ಮೈಸೂರು ವಿಭಾಗೀಯ ಕಚೇರಿಯು ಇಲ್ಲಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ‘ಸಂಜ್ಞಾ ಭಾಷೆ’ಯ ಅಂಚೆ ಕಾರ್ಡ್‌ ಅನ್ನು ಸೋಮವಾರ ಬಿಡುಗಡೆ ಮಾಡಿತು.

‘ಅಂತರರಾಷ್ಟ್ರೀಯ ಸಂಜ್ಞಾ ಭಾಷಾ ದಿನಾಚರಣೆ’ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಮೆರಿಕ ಸಂಜ್ಞಾ ಭಾಷೆ’ಯ ಅಕ್ಷರಗಳಿರುವ ಕಾರ್ಡ್‌ನ್ನು ಅನಾವರಣಗೊಳಿಸಿದ ಸೀನಿಯರ್ ಸೂಪರಿಂಟೆಂಡೆಟ್‌ ಎಚ್‌.ಸಿ.ಸದಾನಂದ, ‘ವಾಕ್ ಮತ್ತು ಶ್ರವಣ ಸಮಸ್ಯೆ ಎದುರಿಸುತ್ತಿರುವವರಿಗೆ ಸಂಜ್ಞಾ ಭಾಷೆಯೇ ಜೀವನ ರೂಪಿಸುತ್ತದೆ’ ಎಂದರು.

‘ಸಂಜ್ಞೆಗಳಿರುವ ಚಿತ್ರದ ಅಂಚೆ ಕಾರ್ಡ್‌ ಭಾಷೆಯ ಮಹತ್ವ ತಿಳಿಸುತ್ತದೆ. ಸಾಮಾನ್ಯ ಜನರೂ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು. ದೋಷವುಳ್ಳವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದೇ ಇಲಾಖೆಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಸಂವಹನ ಸಮಸ್ಯೆ ಎದುರಿಸುತ್ತಿರುವವರಿಗೆ ಆಯಿಷ್‌ ನೆರವಾಗುತ್ತಿದ್ದು, ಪೋಷಕರು ಮಕ್ಕಳ ಬದುಕು ಚೆನ್ನಾಗಿರುವುದಿಲ್ಲವೆಂದು ಬೇಸರವಾಗಬಾರದು. ಮಕ್ಕಳಿಗೆ ಸಂವಹನ, ಜ್ಞಾನ ಸೇರಿದಂತೆ ಬದುಕುವ ಕೌಶಲಗಳನ್ನು ಕಲಿಸಲು ಮುಂದಾಗಬೇಕು. ಭಾಷೆ ಅರ್ಥವಾದರೆ ಬದುಕನ್ನೂ ಗೆಲ್ಲಬಹುದು’ ಎಂದರು.

‘ಬಿಡುಗಡೆಯಾದ ಅಂಚೆ ಕಾರ್ಡ್‌ ವಿಶ್ವದಾದ್ಯಂತ ಮಾರಾಟವಾಗುತ್ತದೆ. ಜಾಗೃತಿ ಮೂಡಿಸುತ್ತದೆ’ ಎಂದು ಹೇಳಿದರು.

ಆಯಿಷ್‌ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಮಾತನಾಡಿ, ‘ಶ್ರವಣ ದೋಷವಿದ್ದರೆ ಸಂವಹನ ಸಮಸ್ಯೆಗಳು ಬರುತ್ತವೆ. ಅವರಿಗೆ ಕಷ್ಟ–ಸುಖಗಳನ್ನು ಹೇಳಿಕೊಳ್ಳಲೂ ಗೊತ್ತಾಗುವುದಿಲ್ಲ. ಹೀಗಾಗಿ ಶಿಕ್ಷಣ ಕಲಿಸಲು ಸಂಜ್ಞಾ ಭಾಷೆ ಕಲಿಕೆ ಅಗತ್ಯವಾಗಿದೆ’ ಎಂದರು.

‘ಪ್ರತಿಯೊಂದು ದೇಶವೂ ತನ್ನದೇ ಆದ ಸಂಜ್ಞಾ ಭಾಷೆಯನ್ನು ಹೊಂದಿದ್ದು, ಭಾರತವೂ ಪ್ರತ್ಯೇಕವಾದ ಭಾಷೆಯನ್ನು ಹೊಂದಿದೆ. ಮಾಧ್ಯಮಗಳು, ಪತ್ರಿಕೆಗಳು ಸಂಜ್ಞಾ ಭಾಷೆಯನ್ನು ಜನರಲ್ಲಿ ಪರಿಚಯಿಸಲು ಪ್ರತ್ಯೇಕ ಕಾಲಂ ಮೀಸಲಿಡುವ ಹಾಗೂ ಕಾರ್ಯಕ್ರಮ ಪ್ರಸಾರ ಮಾಡಬೇಕು’ ಎಂದು ಕೋರಿದರು.

ಆಯಿಷ್‌ ಸದಸ್ಯ ಕಾರ್ಯದರ್ಶಿ ಡಾ.ರುಬೇನ್ ಥಾಮಸ್‌ ವರ್ಗೀಸ್, ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಸುರೇಶ್‌ಕುಮಾರ್ ಹಾಜರಿದ್ದರು.

ಜನರು ಸಂಜ್ಞಾ ಭಾಷೆ ಕಲಿಯಬೇಕು ಪೋಷಕರು ಮಕ್ಕಳಿಗೆ ನೆರವಾಗಬೇಕು ಎಲ್ಲ ಮಕ್ಕಳಂತೆ ಶಿಕ್ಷಣ ಸಿಗಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT