ಮೈಸೂರು: ‘ಸರ್ ಎಂ.ವಿಶ್ವೇಶ್ವರಯ್ಯನವರ ಶಾಶ್ವತ ಯೋಜನೆಗಳ ಕಾರಣದಿಂದಾಗಿ ‘ಮೈಸೂರು ಬ್ರ್ಯಾಂಡ್’ ಜನಪ್ರಿಯವಾಯಿತು’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ನೆನೆದರು.

ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅಭಿಮಾನಿ ಬಳಗದಿಂದ ವಿಶ್ವೇಶ್ವರಯ್ಯ ಅವರ 163ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ನ್ಯೂ ಸಯ್ಯಾಜಿರಾವ್ ರಸ್ತೆಯ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.

‘ಮೈಸೂರು ಸಂಸ್ಥಾನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಅವಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸಿದವರು ವಿಶ್ವೇಶ್ವರಯ್ಯ. ಸ್ಥಳೀಯ ಮಾರುಕಟ್ಟೆಯ ಮೂಲಕ ಗ್ರಾಮೀಣ ರೈತರು, ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನು ಒಗ್ಗೂಡಿಸಿ ಮೈಸೂರಿನ ವಿಶೇಷತೆ ಪ್ರೋತ್ಸಾಹಿಸಿದರು’ ಎಂದು ಸ್ಮರಿಸಿದರು.

ಅಂಕಣಕಾರ ನಂ.ಶ್ರೀಕಂಠಕುಮಾರ್ ಹಾಗೂ ಮೈಸೂರು ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿದರು. ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ನಿರೂಪಕ ಅಜಯ್ ಶಾಸ್ತ್ರಿ, ವಿಜಯ್ ಕುಮಾರ್, ಕೇಬಲ್ ವಿಜಿ, ಪ್ರದೀಪ್ ಕುಮಾರ್, ಸೂರಜ್, ಸದಾಶಿವ್, ಗಣೇಶ್, ವಿಘ್ನೇಶ್ವರ ಭಟ್, ಬ್ರಹ್ಮಚಾರ್, ಶ್ರೀನಿವಾಸ್, ಮಿರ್ಲೆ ಪನೀಶ್, ರಾಘವೇಂದ್ರ ಪಾಲ್ಗೊಂಡಿದ್ದರು.

‘ವಿಶ್ವವೇ ಕೊಂಡಾಡಿದೆ’: ‘ವಿಶ್ವೇಶ್ವರಯ್ಯ ಅವರ ಕೆಲಸಗಳನ್ನು ವಿಶ್ವವೇ ಕೊಂಡಾಡಿದೆ’ ಎಂದು ಶಾಸಕ ಕೆ.ಹರೀಶ್ಗೌಡ ಹೇಳಿದರು.

ಮೈಸೂರು ಯುವ ಬಳಗದಿಂದ ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ಗಳ ಸಂಸ್ಥೆ ಆವರಣದ ಪುತ್ಥಳಿಗೆ ಭಾನುವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಮೈಸೂರು ಪ್ರದೇಶಕ್ಕೆ ಅವರ ಕೊಡುಗೆ ಅಪಾರ’ ಎಂದು ಸ್ಮರಿಸಿದರು.

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಮುಖಂಡರಾದ ಅಚ್ಯುತ, ಜಿ. ರಾಘವೇಂದ್ರ, ಮೋಹನ್ ಕುಮಾರ್, ರವಿಚಂದ್ರ, ನವೀನ್, ನಂಜುಂಡಸ್ವಾಮಿ, ಸಂಜಯ್ ಗೌಡ, ಶಫಿ, ಗೌತಮ್ ಬಾಲಾಜಿ, ಚರಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.