ಸೋಮವಾರ, 2 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್ ಟೆನಿಸ್: ಹಿಮಾಂಶಿ, ರೋಹಿತ್‌ಗೆ ಪ್ರಶಸ್ತಿ

ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ
Published 18 ಜುಲೈ 2024, 21:58 IST
Last Updated 18 ಜುಲೈ 2024, 21:58 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ಹಿಮಾಂಶಿ ಚೌಧರಿ ಹಾಗೂ ರೋಹಿತ್‌ ಶಂಕರ್‌ ಅವರು ಗುರುವಾರ ಇಲ್ಲಿ ಆರಂಭಗೊಂಡ ಮೂರನೇ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 19 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯು ನಗರದ ಮೈಸೂರು ವಿ.ವಿ. ಜಿಮ್ನಾಷಿಯಂ ಹಾಲ್‌ನಲ್ಲಿ ಆಯೋಜಿಸಿರುವ ಟೂರ್ನಿಯ 19 ವಯಸ್ಸಿನ ಒಳಗಿನವರ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಹಿಮಾಂಶಿ 15-13, 14-16, 7-11, 11-5 , 17-15, 11-4 ಅಂತರದಲ್ಲಿ ದೇಶ್ನಾ ವಂಶಿಕಾರನ್ನು ಪರಾಭಾವಗೊಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಹಿಮಾಂಶಿ 8-11, 11-7, 9-11, 12-10, 11-8 ರಿಂದ ಸಹನಾ ಮೂರ್ತಿ ಅವರನ್ನು ಹಾಗೂ ದೇಶ್ನಾ ವಂಶಿಕಾ 11-9, 11-8, 11-13 , 7-11, 11-3ರಿಂದ ತೃಪ್ತಿ ಪುರೋಹಿತ್‌ರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಬಾಲಕರ ವಿಭಾಗ ಫೈನಲ್‌ನಲ್ಲಿ ರೋಹಿತ್ 11-5, 11-5, 13-11, 12-10 ರಿಂದ ತೇಶುಬ್‌ ದಿನೇಶ್‌ ಎದುರು ವಿಜಯದ ನಗೆ ಬೀರಿದರು. ಸೆಮಿಫೈನಲ್‌ನಲ್ಲಿ ರೋಹಿತ್‌ 11-6, 5-11, 15-13, 11-9 ರಿಂದ ಅಥರ್ವ ನವರಂಗೆ ಎದುರು ಹಾಗೂ ತೇಶುಬ್ 9-11 , 11-4 , 11-2 , 9-11, 17-15 ರಿಂದ ವಿ.ಜಿ. ವಿಭಾಸ್‌ ಅವರನ್ನು ಮಣಿಸಿದರು.

19 ವಯಸ್ಸಿನ ಒಳಗಿನವರ ಬಾಲಕಿಯರ ವಿಭಾಗದ ರನ್ನರ್‌ ಅಪ್‌ ದೇಶ್ನಾ ವಂಶಿಕಾ ಆಟದ ವೈಖರಿ – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.
19 ವಯಸ್ಸಿನ ಒಳಗಿನವರ ಬಾಲಕಿಯರ ವಿಭಾಗದ ರನ್ನರ್‌ ಅಪ್‌ ದೇಶ್ನಾ ವಂಶಿಕಾ ಆಟದ ವೈಖರಿ – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT