ಮೈಸೂರು: ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕಾವ್ಯದ ಮೂಲಕ ನುಡಿನಮನ ಸಲ್ಲಿಸಲಾಯಿತು.

ಕವಿ ಹಾಗೂ ಕವಯತ್ರಿಯರು ವಾಜಪೇಯಿ ಅವರ ವ್ಯಕ್ತಿತ್ವ, ಸಾಧನೆ ಕುರಿತ ಕವನಗಳನ್ನೇ ಹೆಚ್ಚಾಗಿ ವಾಚಿಸಿದರು. ವಾಜಪೇಯಿ ಅಲ್ಲದೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಅವರ ಸಾಧನೆ ಹಾಗೂ ದೇಶಭಕ್ತಿ, ಸಂಸ್ಕೃತಿ ವಿಷಯಗಳ ಕುರಿತೂ ಕಾವ್ಯ ವಾಚನ ನಡೆಯಿತು.

ಗೀತಾ ಗಣೇಶ್, ಶ್ರೀಕಂಠೇಶ್, ವಾಸು, ಅಂಬುಜಾ, ವೆಂಕಟರಮಣ, ವಿಜಯಲಕ್ಷ್ಮಿ, ಎಸ್.ಲಕ್ಷ್ಮಿ, ಪದ್ಮಾರಾವ್, ವಾಣಿ ರಾಘವೇಂದ್ರ, ಪ್ರಕಾಶ್, ಎಂ.ಆರ್.ಶಿವರಂಜನಿ ಮೊದಲಾದವರು ಕವಿತೆ ವಾಚಿಸಿದರು. ಎಸ್.ಲಕ್ಷ್ಮಿ ಅವರು ತಮ್ಮ ‘ಇಂದ್ರನಾದನು, ನರೇಂದ್ರನಾದನು’ ಕವಿತೆಯನ್ನು ಹಾಡಿ ಮೂಲಕ ಗಮನ ಸೆಳೆದರು.

ಎಂ.ಬಿ.ಸಂತೋಷ್ ಅವರು ವಾಚಿಸಿದ ಚುಟುಕು ಹೀಗಿದೆ... ‘ಮದುವೆಗಾಗಿ ದೇಶವನ್ನೇ ಬಿಟ್ಟ ಸೋನಿಯಾಜಿ, ದೇಶಕ್ಕಾಗಿ ಮದುವೆಯನ್ನೇ ಬಿಟ್ಟ ಅಟಲ್‌ಜಿ’.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರ ಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ ಮಾತನಾಡಿ, ‘ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡುವವರಿಗೆ ಪ್ರಾಧಾನ್ಯತೆ ಇಲ್ಲ. ಹಣದ ಹೊಳೆ ಹರಿಸುವವರಿಗೇ ಮಹತ್ವ. ಆದರೆ, ವಾಜಪೇಯಿ ಅವರ ಕಾಲದಲ್ಲಿ ಇಷ್ಟು ಹದಗೆಟ್ಟಿರಲಿಲ್ಲ. ವಾಜಪೇಯಿ ಅವರು ದೇಶದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರು ಇನ್ನೂ 10 ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಗಂಗಾ–ಕಾವೇರಿ ನದಿ ಜೋಡಣೆ ಆಗಿರುತ್ತಿತ್ತು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಹೇಮಗಂಗಾ ಅವರು ವಾಜಪೇಯಿ ಅವರ ಜೀವನ ಚಿತ್ರಣವನ್ನು ಕಟ್ಟಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.