ಮೈಸೂರು: ಅಮೆರಿಕದ ಸ್ಯಾನ್ ಬರ್ನಾರ್ಡಿನೊದಲ್ಲಿ ಗುಂಡಿಗೆ ಬಲಿಯಾದ ಮೈಸೂರಿನ ಯುವಕ ಅಭಿಷೇಕ್ ಸುದೇಶ್ ಭಟ್ ಅವರ ಕಿರಿಯ ಸೋದರ ಅಭಿಶ್ರೇಷ್ಠ ಅವರಿಗೆ ಸೋಮವಾರ ತುರ್ತು ಪಾಸ್ಪೋರ್ಟ್ ನೀಡಲಾಗಿದ್ದು, ಮಂಗಳವಾರ ‘ತುರ್ತು ವೀಸಾ‘ ಕೈ ಸೇರುವ ನಿರೀಕ್ಷೆ ಇದೆ.

ಅಭಿಷೇಕ್ ಅವರ ತಂದೆ ಮತ್ತು ತಾಯಿಗೆ ಈಗಾಗಲೇ ವೀಸಾ ಲಭ್ಯವಾಗಿದೆ ಎಂದು ಅಭಿಷೇಕ್ ಸಂಬಂಧಿ ರಾಮನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಂಡಿನ ದಾಳಿ ನಡೆಸಿದ ಆರೋಪಿ ಎರಿಕ್ ಡೆವೊನ್ ಟರ್ನರ್ನನ್ನು ಅಲ್ಲಿನ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮಾಹಿತಿ ಬಂದಿದೆ. ದಾಳಿಗೆ ಕಾರಣ ಇದುವರೆಗೂ ಗೊತ್ತಾಗಿಲ್ಲ ಎಂದು ಅವರು ಹೇಳಿದರು.

ಅಭಿಷೇಕ್ ಕುಟುಂಬದವರ ನೆರವಿಗಾಗಿ ಸಂಬಂಧಿಕರು ಮತ್ತು ಸ್ನೇಹಿತರು ಆರಂಭಿಸಿರುವ ಆನ್ಲೈನ್ ದೇಣಿಗೆ ಸಂಗ್ರಹ ಕಾರ್ಯ ಮುಂದುವರಿದಿದ್ದು, ಸೋಮವಾರ ₹ 10 ಲಕ್ಷಕ್ಕೂ ಹೆಚ್ಚು ನೆರವು ಹರಿದು ಬಂದಿದೆ.

ಇನ್ನಷ್ಟು...

ಅಮೆರಿಕದಲ್ಲೇ ಅಭಿಷೇಕ್ ಅಂತ್ಯಕ್ರಿಯೆ

ಮೈಸೂರಿನ ಯುವಕನಿಗೆ ಅಮೆರಿಕದಲ್ಲಿ ಗುಂಡೇಟು; ಸಾವು

ಭಾರತೀಯರಿಗೆ ರಕ್ಷಣೆ ನೀಡಿ: ಅಮೆರಿಕಾದಲ್ಲಿ ಗುಂಡಿಗೆ ಬಲಿಯಾದ ಅಭಿಷೇಕ್ ತಂದೆ

ಗುಂಡಿನ ದಾಳಿ: ಆರೋಪಿ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.