ಎಚ್.ಡಿ.ಕೋಟೆ: ತಾಲ್ಲೂಕಿನ ಅಂತರಸಂತೆ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಚಲನಚಿತ್ರ ನಟರು, ಉದ್ಯಮಿಗಳು, ರಾಜಕೀಯ ಮುಖಂಡರು, ಉನ್ನತ ಅಧಿಕಾರಿಗಳು ಕುಟುಂಬ ಸಮೇತ ಲಗ್ಗೆ ಇಡುತ್ತಿದ್ದಾರೆ.

ಚಲನಚಿತ್ರ ನಟ ಗಣೇಶ್, ಹಾಸ್ಯನಟರಾದ ರವಿಶಂಕರ್ ಗೌಡ, ಜಗದೀಶ್, ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರು ಭೇಟಿ ನೀಡಿದ್ದರು. ಸಫಾರಿ ವೇಳೆ ಕಂಡ ವಿವಿಧ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದು ಸಂತಸಪಟ್ಟರು. ರಾಜುಗೌಡ ನಾಯಕ್ ಅವರು ಕ್ಯಾಮೆರಾ ಬಳಸಿ ಛಾಯಾಚಿತ್ರಗಳನ್ನು ಸೆರೆ ಹಿಡಿದರು. ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಂಗಲ್ ಲಾಡ್ಜಸ್ ಅಂಡ ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ ಸಫಾರಿ ಮಾಡಿದ್ದರು.

‘ವನ್ಯಸಂಪತ್ತನ್ನು ಎಲ್ಲರೂ ಸಂರಕ್ಷಿಸಬೇಕು. ಕಾಡು ನಾಶದಿಂದ ಮನುಕುಲ ನಾಶವಾಗುತ್ತದೆ’ ಎಂದು ರಾಜುಗೌಡ ಹೇಳಿದರು.

‘ಸಫಾರಿ ಅದ್ಭುತ ಅನುಭವ ಕೊಟ್ಟಿತು. ಬಹಳ ಹತ್ತಿರದಿಂದ ಚಿರತೆ, ಹುಲಿ, ಆನೆ ಮತ್ತು ಇತರೆ ವನ್ಯಜೀವಿಗಳನ್ನು ನೋಡಿ ಖುಷಿಯಾಗಿದೆ’ ಎಂದು ನಟ ಗಣೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.