ಮೈಸೂರು: ನಗರದ ಜನನಿ ಸೇವಾ ಟ್ರಸ್ಟ್ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಾಲಿಕೆ ಮಾಜಿ ಸದಸ್ಯೆ ಕೆ.ಕಮಲಮ್ಮ ಅವರ 14ನೇ ಪುಣ್ಯಸ್ಮರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 14 ಮಹಿಳೆಯರನ್ನು ಗೌರವಿಸಲಾಯಿತು.

ಟ್ರಸ್ಟ್ನಿಂದ ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ‘ಮಹಿಳೆ- ಕಹಳೆ’ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತೆ ನಾಜಿಯಾ ಸುಲ್ತಾನ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಮಂಗಳ ಮುದ್ದುಮಾದಪ್ಪ ಅವರು ಸಾಧಕರನ್ನು ಸನ್ಮಾನಿಸಿದರು.

‘ಮಹಿಳೆಯರು ಯಾವುದೇ ಕೆಲಸದಲ್ಲಿ ಆತ್ಮವಿಶ್ವಾಸದಿಂದ ತೊಡಗಿಸಿಕೊಂಡರೆ ಉತ್ತಮ ಸಾಧನೆ ಸಾಧ್ಯ’ ಎಂದು ನಾಜಿಯಾ ಸುಲ್ತಾನ ಹೇಳಿದರು.

ಸಾಧಕರಾದ ಸುಚಿತ್ರಾ ಹೆಗಡೆ, ಪ್ರೊ.ಕೆ.ಆರ್. ಪ್ರೇಮಲೀಲಾ, ಯಶೋದಾ ರಾಮಕೃಷ್ಣ, ತುಳಸಿ ವಿಜಯಕುಮಾರಿ, ಕೆ.ಬಿ.ಮೀನಾಕ್ಷಿ, ಪ್ರೊ.ಎಸ್.ಡಿ.ಶಶಿಕಲಾ, ಎ.ಪುಷ್ಪಾ ಅಯ್ಯಂಗಾರ್, ಭ್ರಮರಾಂಭ ಮಹೇಶ್ವರಿ, ಪೂಜಾ ಜೋಶಿ, ಸೌಗಂಧಿಕಾ ಜೋಯಿಸ್, ಲಕ್ಷ್ಮಿ ದಿನೇಶ್, ಜೆ. ಶಿಲ್ಪಾ, ನಂದಿನಿ ಸತೀಶ್, ಶ್ರುತಿ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ಟ್ರಸ್ಟ್ ಗೌರವಾಧ್ಯಕ್ಷೆ ಎಸ್.ನಾಗರತ್ನಾ ಸೋಮಶೇಖರ್, ಅಧ್ಯಕ್ಷ ಎಂ.ಕೆ.ಅಶೋಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.