ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

3 ತಿಂಗಳಲ್ಲಿ ಕಿತ್ತು ಬಂದ ಜಲ್ಲಿಕಲ್ಲುಗಳು

ನಿಜಲಿಂಗಪ್ಪ ಕಾಲೊನಿ ಕಾಂಕ್ರಿಟ್‌ ರಸ್ತೆ ಕಳಪೆ ಕಾಮಗಾರಿ: ಆಕ್ರೋಶ
Published : 15 ಫೆಬ್ರುವರಿ 2016, 11:41 IST
ಫಾಲೋ ಮಾಡಿ
Comments

ರಾಯಚೂರು: ನಗರದ ವಾರ್ಡ್‌ ಸಂಖ್ಯೆ 5ರಲ್ಲಿಯ ನಿಜಲಿಂಗಪ್ಪ ಕಾಲೊನಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ನಿವಾಸದಿಂದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ  ವರೆಗೆ ನಿರ್ಮಾಣ ಮಾಡಿರುವ ಸಿಮೆಂಟ್‌ ಕಾಂಕ್ರಿಟ್‌ (ಸಿ.ಸಿ.) ರಸ್ತೆ ಮೂರು ತಿಂಗಳಲ್ಲೇ ಕಿತ್ತು ಬಂದಿದೆ.

ಸುಮಾರು ಎರಡೂವರೆ ಕಿ.ಮೀ. ದೂರದವರೆಗೆ ಈ ಸಿ.ಸಿ. ರಸ್ತೆ ಕಾಮಗಾರಿ ಶಾಸಕರ ಅನುದಾನದಲ್ಲಿ ನಡೆದಿದ್ದು, ಭೂಸೇನಾ ನಿಗಮ ಕಾಮಗಾರಿ ನಿರ್ವಹಿಸಿದೆ. ಆದರೆ, ರಸ್ತೆ ನಿರ್ಮಾ ಣವಾದ ಮೇಲೆ ಸರಿಯಾಗಿ ನೀರುಣಿಸದ ಕಾರಣ ಮತ್ತು ಕಳಪೆ ಗುಣ ಮಟ್ಟದಿಂದಾಗಿ ರಸ್ತೆಯ ಬಹುತೇಕ ಕಡೆ ಕಾಂಕ್ರಿಟ್‌ ಜಲ್ಲಿಕಲ್ಲು  ಕಿತ್ತುಬಂದಿವೆ.

ಜತೆಗೆ ಈ ರಸ್ತೆಯಲ್ಲಿರುವ ಒಳಚ ರಂಡಿ ಮ್ಯಾನ್‌ಹೋಲ್‌ಗಳಲ್ಲಿ ಅನೇಕ ಮ್ಯಾನ್‌ಹೋಲ್‌ಗಳು ಕುಸಿದಿವೆ. ಇದರಿಂದ ಅಪಘಾತಗಳು ಸಂಭವಿಸಿವೆ.
ಇನ್ನು ಕೆಲವು ಮ್ಯಾನ್‌ಹೋಲ್‌ಗಳು ರಸ್ತೆ ಮಧ್ಯಕ್ಕೆ ಬಂದಿದ್ದು, ಅವುಗಳ ನಿರ್ಮಾಣ ಹಂತದಲ್ಲಿ ಇರಿಸಿದ್ದ ಕಲ್ಲುಗಳು ಈಗಲೂ ಹಾಗೆಯೇ ಇವೆ. ಇದರಿಂದ ವಾಹನ  ಸಂಚಾರಕ್ಕೆ ತೊಡಕಾಗಿದೆ.

ಸುಮಾರು 12 ಅಡಿ ಸಿ.ಸಿ. ರಸ್ತೆ ನಿರ್ಮಾಣ ಆಗಿದೆ. ಆದರೆ, ರಸ್ತೆ ಅಂಚಿಗೆ ಮುರುಮ್‌ಅನ್ನು ರಸ್ತೆಯ ಎತ್ತರಕ್ಕೆ ಹಾಕಿಲ್ಲ. ಇದರಿಂದ ಸಿ.ಸಿ.ರಸ್ತೆಗೂ ಮತ್ತು ಮೊರಂ ಹಾಕಿರುವ ಭಾಗಕ್ಕೂ ಸಾಕಷ್ಟು ತಗ್ಗು ಇದ್ದು, ಬೈಕ್‌ ಸವಾರರು ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ.
ಈ ರಸ್ತೆಯ ಪಾರ್ಶ್ವದಲ್ಲಿ ರೈಲು ಹಳಿಗುಂಟ ಚರಂಡಿ ನಿರ್ಮಾಣ ಆಗದೆ ಇರುವುದರಿಂದ ಚರಂಡಿ ನೀರು ರಸ್ತೆಗೆ ನುಗ್ಗುವ ಸಾಧ್ಯತೆಯೂ ಇದೆ.

‘ಮ್ಯಾನ್‌ಹೋಲ್‌ ನಿರ್ಮಾಣ ಸರಿಯಾಗಿ ಆಗದೆ. ವಾಹನಗಳ ಭಾರಕ್ಕೆ ಕುಸಿದಿದೆ. ವಾಹನ ಸವಾರರು ಇದನ್ನು ಗಮನಿಸದಿದ್ದರೆ ಅಪಘಾತ ಖಂಡಿತ. ಮೊನ್ನೆ ಬೈಕ್‌ ಸವಾರರೊಬ್ಬರು ಕುಸಿದ ಮ್ಯಾನ್‌ಹೋಲ್‌ ಹಳ್ಳವನ್ನು ತಪ್ಪಿಸಲು ಹೋಗಿ ನಮ್ಮ ಮನೆ ಗೇಟ್‌ ವರೆಗೂ ಅಡ್ಡಾದಡಿಯಾಗಿ ನುಗ್ಗಿ ದರು’ ಎಂದು   ನಾರಾಯಣ ಹೇಳಿದರು.

‘ಜಲ್ಲಿಕಲ್ಲುಗಳು ಕಿತ್ತು ಬರುತ್ತಿ ರುವುದು ನೋಡಿ ದರೆ ನೂರಕ್ಕೆ ನೂರು ಕಳಪೆ ಕಾಮಗಾರಿ ಯಾಗಿದೆ. ವಿಪರೀತ ದೂಳು ಎಳುತ್ತದೆ ದೂರಿದರು.
ದಿನಾ ಅಂಗಡಿಯಲ್ಲಿ ಡಬ್ಬಿಗಳನ್ನು, ಇನ್ನಿತರ ವಸ್ತುಗಳನ್ನು ಒರೆಸುವುದೇ ಒಂದು ಕೆಲಸವಾಗಿದೆ. ರಸ್ತೆ ಕಾಮಗಾರಿ ಕಳಪೆಯಾದ ಕಾರಣ ಕಲ್ಲುಗಳು ಮೇಲೆ ಏಳುತ್ತಿವೆ. ವಾಹನಗಳು ಸಂಚರಿಸಿ ದಾಗ  ದೂಳು ಅಂಗಡಿಯೊಳಗೆ ಆವರಿಸುತ್ತದೆ. ಅಲರ್ಜಿ ಯಿಂದ ಒಂದು ವಾರ ಕೆಮ್ಮು– ಜ್ವರದಿಂದ ಬಳಲು ವಂತಾಯಿತು’ ಎಂದು ಕಿರಾಣಿ ಅಂಗಡಿ ಮಾಲೀಕ ಮನೋಜ್‌ ಕುಮಾರ್‌ ಹೇಳಿದರು.

‘ಕಳಪೆ ಕಾಮಗರಿ ಬಗ್ಗೆ ಜಿಲ್ಲಾಧಿಕಾ ರಿಗೆ ಮೂರು ವಾರಗಳ ಹಿಂದೆ ಯೇ ದೂರು ನೀಡಿದ್ದೇವೆ. ಈ ಕಳಪೆ ಕಾಮಗಾರಿ ನಡೆಸಿರವ ಗುತ್ತಿಗೆದಾರರು ಮತ್ತು ಅವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಚುನಾವಣೆ ಮುಗಿದ ಬಳಿಕ ತಜ್ಞರಿಂದ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಚನ್ನಬಸವ ಯಕ್ಲಾಸಪುರ ಹೇಳಿದರು.

ಮ್ಯಾನ್‌ಹೋಲ್‌ಗಳು ಕುಸಿದಿರುವ ಕಾರಣ ದಿನಾ ಒಂದಲ್ಲಾ ಒಂದು ಬೈಕ್‌ ಇಲ್ಲಿ ಅಪಘಾತಕ್ಕೆ ಒಳಗಾಗುತ್ತಿವೆ. ಇದನ್ನು ತಡೆಯಬೇಕು.
ಎಸ್‌.ನಾರಾಯಣ
ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT