ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ದಿನ ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ ಕೈಗೊಂಡ ನಂತರ ಜಿಲ್ಲೆಯಲ್ಲಿ ಸರ್ಕಾರಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ನನೆಗುದಿಗೆ ಬಿದ್ದಿದ್ದ ಯೋಜನೆಗಳೂ ಮರುಜೀವ ಪಡೆದುಕೊಳ್ಳುತ್ತಿವೆ.

ಜಿಲ್ಲಾಡಳಿತವು ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆ ನಡೆಸಿ ರಾಯಚೂರು ನಗರ ಯೋಜನಾ ಪ್ರದೇಶವನ್ನು (ಎಲ್.ಪಿ.ಎ) ವಿಸ್ತರಿಸಲು ಯೋಜನೆ ರೂಪಿಸಿದೆ. ಇನ್ನು ರಾಯಚೂರು ನಗರ ವ್ಯಾಪ್ತಿಗೆ 25 ಗ್ರಾಮಗಳನ್ನು ಸೇರಿಸಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ನಗರ ವಿಸ್ತಾರ ಹೆಚ್ಚಾಗಿದ್ದರೂ ಜಿಲ್ಲಾಧಿಕಾರಿ ಕಚೇರಿಗಳು ಚಿಕ್ಕದಾದ ಕೊಠಡಿಗಳಲ್ಲಿ ನಡೆಯುತ್ತಿವೆ. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಕಿರಿದಾದ ಜಾಗದಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತಿದೆ. ಆವರಣ ಸಮತಟ್ಟು ಇಲ್ಲದ ಕಾರಣ ವಾಹನಗಳ ನಿಲುಗಡೆಗೂ ಜಾಗವಿಲ್ಲದಂತಾಗಿದೆ. ಹೀಗಾಗಿ ಜಿಲ್ಲಾಡಳಿತ ಯಕ್ಲಾಸಪುರದ ಬಳಿ ಹೊಸದಾಗಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಭರದ ಸಿದ್ಧತೆ ನಡೆಸಿದೆ.

ಜಿಲ್ಲಾಧಿಕಾರಿ ಹೊಸ ಕಚೇರಿ ಕಟ್ಟಡ ಹಳೆಯ ಕಚೇರಿಯಿಂದ ಕೇವಲ 2 ಕಿ.ಮೀ ಅಂತರದಲ್ಲಿ ಇದೆ. ಸಂಚಾರ ಸುಗಮಗೊಳಿಸುವ ದಿಸೆಯಲ್ಲಿ ಲಿಂಗಸುಗೂರು ರಸ್ತೆಯಿಂದ ಡ್ಯಾಡಿ ಕಾಲೊನಿ ಮಾರ್ಗವಾಗಿ ಯಕ್ಲಾಸಪುರ ವರೆಗೂ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮಿನಿ ವಿಧಾನಸೌಧ ಕಾಮಗಾರಿಗೆ ಮರುಜೀವ:

2016ರಲ್ಲಿ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಯಕ್ಲಾಸಪುರ ಬಳಿ ಮಿನಿ ವಿಧಾನಸೌಧ ನಿರ್ಮಿಸಿ ಮೂರು ವರ್ಷಗಳು ಕಳೆದರೂ ಬಳಕೆಯಾಗಿರಲಿಲ್ಲ. ಕಟ್ಟಡದಲ್ಲಿ ಕೆಲ ತಾಂತ್ರಿಕ ಲೋಪ ಕಂಡು ಬಂದ ಕಾರಣ ಸರಿಪಡಿಸಲು ಸೂಚಿಸಲಾಗಿತ್ತು. ಹೊಸ ಕಟ್ಟಡದ ಎದುರು ಚಿಕ್ಕದಾದ ನಾಲಾ ಹರಿದಿರುವ ಕಾರಣ ಹೋಗಲು ರಸ್ತೆಯೂ ನಿರ್ಮಿಸಿರಲಿಲ್ಲ. ಇದೀಗ ಕಾಂಕ್ರೀಟ್ ಗಟಾರು ನಿರ್ಮಿಸಲಾಗುತ್ತಿದೆ. ಅರ್ಧ ಭಾಗ ನಿರ್ಮಾಣವಾಗಿದ್ದು, ಇನ್ನೂ ಅರ್ಧ ಭಾಗ ನಿರ್ಮಾಣವಾಗಬೇಕಿದೆ.

ಕಪ್ಪು ಮಣ್ಣು ಇರುವ ಕಾರಣ ಕಟ್ಟಡದ ಸುತ್ತಲೂ ರಸ್ತೆ ನಿರ್ಮಾಣ ಮಾಡಲು ಗಟ್ಟಿಯಾದ ಕೆಂಪು ಮಣ್ಣು ಸುರಿದು ಸಮತಟ್ಟುಗೊಳಿಸುವ ಕೆಲಸ ಭರದಿಂದ ಸಾಗಿದೆ. ಎರಡು ಜೆಸಿಬಿಗಳು ನಿರಂತವಾಗಿ ಕಾರ್ಯನಿರ್ವಹಿಸುತ್ತಿವೆ.

ಸ್ವಚ್ಛತೆಗೆ ಆದೇಶ:

ಯಕ್ಲಾಸಪುರದಿಂದ ಮಿನಿ ವಿಧಾನಸೌಧದ ವರೆಗೂ ಚಿಕ್ಕದಾದ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಬದಿಗೆ ಅಪಾರ ಪ್ರಮಾಣದಲ್ಲಿ ಜಾಲಿಗಿಡಗಳು ಬೆಳೆದಿದ್ದು, ಊರಿನ ಜನ ಇಲ್ಲಿಯೇ ಬಯಲು ಶೌಚ ಮಾಡುತ್ತಿದ್ದಾರೆ. ರಸ್ತೆ ಬದಿಯ ಜಾಲಿ ತೆರವುಗೊಳಿಸಿ ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಕ್ಲಾಸಪುರದ ಬಳಿಯೇ ನಗರಸಭೆಯ ತ್ಯಾಜ್ಯ ನಿರ್ವಹಣಾ ಘಟಕ ಇದೆ. ನಗರದಲ್ಲಿ ಕಸ ಸಂಗ್ರಹಿಸುವ ನಗರಸಭೆಯ ವಾಹನಗಳು ಚಾಲಕರು ನಿತ್ಯ ಕಸವನ್ನು ಚೆಲ್ಲುತ್ತ ಸಾಗುತ್ತಿದ್ದಾರೆ. ತ್ಯಾಜ್ಯ ಘಟಕದವರೆಗೂ ಬರುವವರೆಗೆ ವಾಹನದಲ್ಲಿ ಅರ್ಧದಷ್ಟು ಕಸ ಇರುವುದಿಲ್ಲ. ಅದನ್ನು ರಸ್ತೆ ಬದಿಗೆ ಸುರಿದು ಹೋಗಿರುವ ಕುರುಹುಗಳು ಕಾಣಸಿಗುತ್ತವೆ.

ಬಸವ ಕಾಲೊನಿ, ಕಾಕತೀಯ ಕಾಲೊನಿಯಿಂದ ಯಕ್ಲಾಸಪುರ ರಸ್ತೆ ತುಂಬೆಲ್ಲ ಕಸದ ರಾಶಿ ಬಿದ್ದುಕೊಂಡಿದೆ. ನಗರಸಭೆಯ ಆರೋಗ್ಯ ಮೇಲ್ವಿಚಾರಕರೂ ಸರಿಯಾಗಿ ಮೇಲ್ವೆಚಾರಣೆ ಮಾಡದ ಕಾರಣ ರಸ್ತೆಗಳು ಗಬ್ಬು ನಾರುತ್ತಿವೆ.

ಯಕ್ಲಾಸಪುರದಲ್ಲಿ ನಿರ್ಮಿಸಿರುವ ಬಸ್ ತಂಗುದಾಣ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿದೆ. ಪ್ರಯಾಣಿಕರು ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅದನ್ನೂ ಸಹ ದುರಸ್ತಿ ಪಡಿಸಬೇಕು ಎನ್ನುವುದು ಯಕ್ಲಾಸಪುರ ಗ್ರಾಮಸ್ಥರ ಮನವಿಯಾಗಿದೆ.

ಗ್ರಾಮದ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಮಿನಿ ವಿಧಾನಸೌಧದ ಎದುರು ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿರುವ ನೀರು ಹರಿದು ಹೋಗಲು ಸರಿಯಾಗಿ ದಾರಿ ಮಾಡಿಕೊಡಬೇಕು. ಇದರಿಂದ ಸೊಳ್ಳೆಗಳ ಕಾಟ ತಪ್ಪಲಿದೆ ಎಂದು ಯಕ್ಲಾಸಪುರದ ಈರೇಶ ಹೇಳುತ್ತಾರೆ.

ನಾಲ್ಕು ಇಲಾಖೆಗಳ ಕಚೇರಿಗೆ ಮಾತ್ರ ಅವಕಾಶ:

ರಾಯಚೂರಿನ ಯಕ್ಲಾಸಪುರದಲ್ಲಿ ದೂರದೃಷ್ಟಿಯಿಂದ ಮಿನಿ ವಿಧಾನಸೌಧ ನಿರ್ಮಾಣ ಮಾಡಿಲ್ಲ. ನಗರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ 52 ಕಚೇರಿಗಳು ಇವೆ. ಇಂದಿಗೂ ಅರ್ಧಕ್ಕಿಂತ ಹೆಚ್ಚು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೂರದೃಷ್ಟಿಯಿಂದ ಮೊದಲೇ ಯೋಜನೆ ರೂಪಿಸಿದ್ದರೆ ಒಂದೇ ಕಟ್ಟಡದಲ್ಲೇ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿತ್ತು. ಆದರೆ, ಹೊಸ ಕಟ್ಟಡದಲ್ಲಿ ನಾಲ್ಕು ಇಲಾಖೆಗಳ ಕಚೇರಿಗಳಿಗೆ ಮಾತ್ರ ಅವಕಾಶ ದೊರೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.

ಹೊಸ ಜಿಲ್ಲೆಗಳಾದ ಯಾದಗಿರಿ, ಕೊಪ್ಪಳ ಹಾಗೂ ಗದಗ ಜಿಲ್ಲೆಯಲ್ಲಿ ಅತ್ಯುತ್ತಮವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ರಾಯಚೂರು ಅತ್ಯಂತ ಹಳೆಯ ಜಿಲ್ಲೆಯಾದರೂ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ವೀರಾಪುರ ಬೇಸರ ವ್ಯಕ್ತಪಡಿಸುತ್ತಾರೆ.

‘2025ರ ಹೊಸ ವರ್ಷದಲ್ಲಿ ಹೊಸ ಕಟ್ಟಡಕ್ಕೆ ಜಿಲ್ಲಾಡಳಿತ ಕಚೇರಿಯನ್ನು ಸ್ಥಳಾಂತರಿಸಲು ಸಿದ್ಧತೆ ಆರಂಭಿಸಲಾಗಿದೆ. ಈಗಿನ ಹಳೆಯ ಕಟ್ಟಡ ಕಾರ್ಯನಿರ್ವಹಣೆಗೆ ಕಿರಿದಾಗಿದೆ. ಹೀಗಾಗಿ ಹೊಸ ಕಟ್ಟಡದಲ್ಲಿ ಮೂಲಸೌಕರ್ಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಆವರಣದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳುತ್ತಾರೆ.

‘ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಮೂಲಕ ಆವರಣದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುವುದು. ಸುತ್ತಲೂ ಆವರಣ ಗೋಡೆ ನಿರ್ಮಾಣವಾಗಬೇಕಿದೆ. ಬೇರೆ ಬೇರೆ ಇಲಾಖೆಗಳನ್ನು ಒಂದೇ ಕಟ್ಟಡಕ್ಕೆ ತರಲು ಅವಕಾಶ ಇದೆ. ಎರಡನೇ ಹಂತದ ಯೋಜನೆಯಲ್ಲಿ ಕಟ್ಟಡ ನಿರ್ಮಾಣ ಮಾಡಬೇಕಾಗಲಿದೆ’ ಎನ್ನುತ್ತಾರೆ ಅವರು.

‘ಜಿಲ್ಲಾಧಿಕಾರಿ ಹೊಸ ಕಚೇರಿಯು 18 ಎಕರೆ ಪ್ರದೇಶವನ್ನು ಹೊಂದಿದೆ. ಕಟ್ಟಡದ ಎರಡೂ ಬದಿಗೂ ರಸ್ತೆಗಳು ಇವೆ. ತಾಲ್ಲೂಕು ಕೇಂದ್ರಗಳಿಂದ ಬರುವವರಿಗೆ ಹೆಚ್ಚು ಅನುಕೂಲವಾಗಿದೆ. ಇದರಿಂದ ನಗರದಲ್ಲಿ ಸಂಚಾರ ಒತ್ತಡವೂ ಕಡಿಮೆಯಾಗಲಿದೆ’ ಎಂದು ವಿವರಿಸುತ್ತಾರೆ.

‘ಹೊಸ ಕಟ್ಟಡದಲ್ಲಿ ಜಿಲ್ಲಾಡಳಿತ ಕಚೇರಿ ಆರಂಭವಾದರೆ ನಿರಂತರ ಸಿಟಿ ಬಸ್ ಸಂಚಾರ ಆರಂಭವಾಗಲಿದೆ. ಈಗಾಗಲೇ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ’ ಎಂದು ಹೇಳುತ್ತಾರೆ.

ಕಾಂಗ್ರೆಸ್ ಅವಧಿಯಲ್ಲೇ ಮಂಜೂರು:

ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಯಚೂರಿಗೆ ಮಿನಿ ವಿಧಾನಸೌಧ ಮಂಜೂರು ಮಾಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿತ್ತು. ಹೊಸ ಕಟ್ಟಡ ಜಿಲ್ಲಾಧಿಕಾರಿ ಕಚೇರಿಗೆ ಯೋಗ್ಯವಾಗಿಲ್ಲ. ಇದನ್ನು ಸರ್ಕಾರಿ ಇಲಾಖೆಯ ಕಚೇರಿಗೆ ಬಳಸಿ ಬೇರೊಂದು ಕಟ್ಟಡ ನಿರ್ಮಿಸಲಾಗುವುದು ಎಂದು ರಾಯಚೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿತ್ತು. ಹಿಂದಿನ ಜಿಲ್ಲಾಧಿಕಾರಿಗಳಿಗೂ ಈ ವಿಷಯದಲ್ಲಿ ಆಸಕ್ತಿ ಇರಲಿಲ್ಲ.

‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಮರು ಜೀವ ಪಡೆದುಕೊಂಡಿವೆ. ಮೂರು ಹಂತಗಳಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಮೊದಲ ಹಂತದ ನಿರ್ಮಾಣ ಕಾರ್ಯ ಮುಗಿದೆ. ಇನ್ನುಳಿದ ಕಟ್ಟಡಗಳ ಕಾಮಗಾರಿಗೂ ಸರ್ಕಾರದ ಅನುಮೋದನೆ ದೊರೆಯುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್ ವಕ್ತಾರ ರಜಾಜ್ ಉಸ್ತಾದ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.