ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿಯುವ ನೀರಿಗೆ ಕೀಟನಾಶಕ ಔಷಧ ಹಾಕಿದ ಕೀಡಿಗೇಡಿಗಳು

ರೋಡಲಬಂಡ ಗ್ರಾಮದಲ್ಲಿ ನಡೆದ ಘಟನೆ: ಕ್ರಮಕ್ಕೆ ಆಗ್ರಹ
Published : 6 ಅಕ್ಟೋಬರ್ 2024, 14:45 IST
Last Updated : 6 ಅಕ್ಟೋಬರ್ 2024, 14:45 IST
ಫಾಲೋ ಮಾಡಿ
Comments

ಹಟ್ಟಿ ಚಿನ್ನದ ಗಣಿ: ರೋಡಲಬಂಡ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ಗೆ ಕೀಡಿಗೇಡಿಗಳು ಕೀಟನಾಷಕ ಔಷಧ ಬೆರಕೆ ಮಾಡಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಎಂದಿನಂತೆ ನೀರು ಬಂದಾಗ ನಳದಲ್ಲಿ ನೀರಿನ ಬದಲು ಬರಿ ಗಬ್ಬು ವಾಸನೆ ಹಾಗೂ ನೊರೆ ಕಂಡು ಬಂತು. ಗ್ರಾಮಸ್ಧರು ವಾಟರ್ ಮ್ಯಾನ್ ಅವರಿಗೆ ತಿಳಿಸಿದ್ದಾರೆ. ಎಚ್ಚೆತ್ತುಕೊಂಡ ವಾಟರ್ ಮ್ಯಾನ್, ಹೆಂಡ್ ಟ್ಯಾಂಕ್ ತೆರಳಿ ಪರಿಶೀಲಿಸಿದರು. ನೀರು ಸೇವನೆ ಮಾಡದಂತೆ ಗ್ರಾಮಸ್ಧರಿಗೆ ತಿಳಿಸಿದ್ದಾರೆ.

ಕುಡಿಯುವ ನೀರಿನಲ್ಲಿ ವಿಷಾ ಅನಿಲ (ಕೀಟನಾಶಕ) ಔಷಧ ಹಾಕಿದರ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ ಹಾಗೂ ತಾ.ಪಂ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಧಳಕ್ಕೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಬಗ್ಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ಕೀಟ ನಾಶಕ ಔಷಧ ಯಾರು ಹಾಕಿದ್ದಾರೆ ಎಂಬುವುದರ ಬಗ್ಗೆ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ ಕೀಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಟ್ಟಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಲಾಗಿದೆ.

ರೋಡಲಬಂಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಕೀಡಿಗೇಡಿಗಳು ಕೀಟನಾಶಕ ಔಷದಿ ಹಾಕಿದ್ದರಿಂದ ಕುಡಿಯುವ ನೀರು ನೊರೆಯಾಗಿದೆ.
ರೋಡಲಬಂಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಕೀಡಿಗೇಡಿಗಳು ಕೀಟನಾಶಕ ಔಷದಿ ಹಾಕಿದ್ದರಿಂದ ಕುಡಿಯುವ ನೀರು ನೊರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT