ರಾಯಚೂರು: ನಗರದ ವಾರ್ಡ್ ನಂಬರ್ 31 ಸಿಯಾತಲಾಬ್ ಬಡಾವಣೆಯಲ್ಲಿ ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 70 ಲೀಟರ್ ನಿಷೇಧಿತ ಕಲಬೆರಕೆ ಸೇಂದಿ ಹಾಗೂ ಸಿ.ಎಚ್ ಪೌಡರ್ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಲಕ್ಷ್ಮಣ ಅವರ ಮನೆ ಮೇಲೆ ದಾಳಿ ನಡೆಸಿ ಕೈಹೆಂಡ ತಯಾರಿಸಲು ಬಳಸುವ ಅಲ್ಫಾಜೋಲ್ಮಂ, ಸಿ.ಎಚ್ ಪೌಡರ್, ಬಿಳಿ ಪೇಸ್ಟ್ ಸೇರಿದಂತೆ 70 ಲೀಟರ್

ಸೇಂದಿ ಜಪ್ತಿ ಮಾಡಿಕೊಂಡು ಆರೋಪಿಗಳಾದ ಲಕ್ಷ್ಮಣ, ಹುಲಿಗೆಮ್ಮ ಮತ್ತು ಜಮಲಮ್ಮ ಅವರನ್ನು ಬಂಧಿಸಿದ್ದಾರೆ.

ನಗರಸಭೆ ವಾರ್ಡ್ ನಂಬರ್ 31ರಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಅದರೂ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು, ನೇತಾಜಿ ನಗರ ಠಾಣೆಯ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ದಾಳಿ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.