ಲಿಂಗಸುಗೂರು: ತಾಲ್ಲೂಕಿನ ಹೊನ್ನಳ್ಳಿಯಿಂದ ಮುದ್ಬಾಳ ಕ್ರಾಸ್‌ವರೆಗೆ ಕೈಗೆತ್ತಿಕೊಂಡ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪಟ್ಟಣ ಸೇರಿದಂತೆ ಕಸಬಾಲಿಂಗಸುಗೂರ ಬಳಿ ನಿಧಾನಗತಿಯಿಂದ ಸಾಗಿದೆ. ಕಟ್ಟಡ ಹಾಗೂ ಬಣವೆ ತೆರವುಗೊಳಿಸಿ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಕಸಬಾಲಿಂಗಸುಗೂರು ಗ್ರಾಮಸ್ಥರು ಒತ್ತಾಯಿಸಿದರು.

ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್ ಅವರಿಗೆ ಗುರುವಾರ ಮನವಿ ಸಲ್ಲಿಸಿ,‘ಸರ್ಕಾರದ ನಿಯಮದಂತೆ ರಸ್ತೆ ಅಗಲೀಕರಣಕ್ಕೆ ಭಾಗಶಃ ರೈತರು ಒಪ್ಪಿಕೊಂಡಿದ್ದೇವೆ. ಕೆಲವೇ ಜನರ ಅಸಹಕಾರ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ರಸ್ತೆ ಅಕ್ರಮಿತ ಕಟ್ಟಡ, ಶೆಡ್, ಬಣವೆ ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಮನ ಸೆಳೆದರು.

ಹಳೆ ರಸ್ತೆ ಅಗೆದು ತಂಟೆ ತಕರಾರು ಮುಂದಿಟ್ಟು ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿವೆ. ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ತೆಗ್ಗು ಗುಂಡಿಗಳಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿಯಮಾನುಸಾರ ಅತಿಕ್ರಮಣ ತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ಆಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯ ಮುದಕಪ್ಪ ನಾಯಕ, ಮುಖಂಡರಾದ ರಾಮಯ್ಯ ಗುತ್ತೇದಾರ, ಅಮರೇಶ ಹೊರಪೇಟೆ, ಸೂಗಯ್ಯ ಅತ್ನೂರು, ಗುರಪ್ಪ ಗುತ್ತೇದಾರ, ವಿರೇಶ ಭೋವಿ, ಭೀಮಣ್ಣ ಹಿರೇಮನಿ, ಕುಪ್ಪಣ್ಣ ಯತಗಲ್, ಬಸವರಾಜ ಯತಗಲ್, ಸಿದ್ದು ಹಿರೇಮನಿ, ಶರಣಬಸವ ಭಟ್ಟರ್, ಫಕೀರಪ್ಪ ರಾಮಸ್ವಾಮಿ, ಬಸಪ್ಪ ರಾಮಸ್ವಾಮಿ, ಯಮನಪ್ಪ ನರಕಲದಿನ್ನಿ, ಮೌನೇಶ ಉಪ್ಪಾರ, ರಾಜೇಶ ಮಾಣಿಕ್, ಅಸ್ಕಿಹಾಳ ನಾಗರಾಜ, ಮಂಜುನಾಥ ಕುಂಬಾರ, ಪಂಪಣ್ಣ, ರವಿಕುಮಾರ, ಸಂಗಪ್ಪ, ರಮೇಶ, ಅಮರಪ್ಪ, ಹೊಳಿಯಪ್ಪ, ಕುಪ್ಪಣ್ಣ ಮೇಲಗೇರಿ, ವಿಕ್ರಮಗೌಡ, ಯಲ್ಲಪ್ಪ, ಬಸವರಾಜ, ನಾಗರಾಜ ಸೇರಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.