ಹಟ್ಟಿಚಿನ್ನದಗಣಿ: ‘ಸ್ಧಳೀಯ ಗಣಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊತರೆಯಿದ್ದು ಶೀಘ್ರದಲ್ಲೇ 260 ಜನರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ಹಟ್ಟಿ ಚಿನ್ನದಗಣಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಶೆಟ್ಟಣ್ಣನವರ ತಿಳಿಸಿದ್ದಾರೆ.

‘ಚಿನ್ನದ ಬೆಲೆ ಹೆಚ್ಚಳವಾಗಿದ್ದು ಗಣಿ ಕಂಪನಿ ಲಾಭದ ಮಾರ್ಗದಲ್ಲಿ ಮುನ್ನುಗುತ್ತಿದೆ, ಕಾರ್ಮಿಕ ಕಾಲೊನಿ ಅಭಿವೃದ್ದಿಗೆ ₹600 ಕೋಟಿ ವೆಚ್ಚದಲ್ಲಿ ಹಟ್ಟಿ ಕ್ಯಾಂಪ್ ಪ್ರದೇಶದ ಅಭಿವೃದ್ಧಿಗೆ ವಿವಿದ ಯೋಜನೆ ತಯಾರಿಸಲಾಗಿದೆ’ ಎಂದು ಗಣಿ ಆಡಳಿತ ಕಚೇರಿಯಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದರು.

‘ಕಾರ್ಮಿಕ ಕಾಲೊನಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಕಾಟರ್ಸ್ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ನೋಟಿಸ್ ನೀಡಿ ಕ್ರಮ ಕೈಗೊಂಡಿದ್ದೇವೆ. ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಹಟ್ಟಿ ವಂದಲಿ ವಸೂರು ಗ್ರಾಮದಲ್ಲಿ ಚಿನ್ನದ ಗಣಿ ಸ್ಧಾಪನೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದ್ದು ಸರ್ಕಾರದ ಮಟ್ಟದಲ್ಲಿದೆ. ಆದೇಶ ಬಂದ ಬಳಿಕ ನೂತನ ಗಣಿ ಸ್ಧಾಪನೆ ಮಾಡಲಾಗುವುದು’ ಎಂದರು.

ಕಾರ್ಮಿಕರಿಗೆ ಮುಂಬಡ್ತಿ ನೀಡಿ, ಐಟಿಐ, ಇಂಜಿನಿಯರಿಂಗ್ ನೇಮಕಾತಿ ಮಾಡಿಕೊಳ್ಳಲು ಆದೇಶ ಹೊರಡಿಸಲು ಆಡಳಿತ ಮಂಡಳಿ ಮುಂದಾಗಿದ್ದು, ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ. ಮುಂದಿನ ದಿನಗಳಲ್ಲಿ ನೇಮಕಾತಿ ಮೂಲಕ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.

ಈ ವೇಳೆ ಆಪ್ತ ಸಹಾಯಕ ರಮೇಶ ಸೇರಿದಂತೆ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.