ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕ: ಬಸವರಾಜ ನಾಡಗೌಡ

25ನೇ ಕಾರ್ಗಿಲ್ ವಿಜಯೋತ್ಸವ: ಸಂಭ್ರಮಾಚರಣೆ, ಹುತಾತ್ಮ ಯೋಧರಿಗೆ ನಮನ
Published 26 ಜುಲೈ 2024, 14:37 IST
Last Updated 26 ಜುಲೈ 2024, 14:37 IST
ಅಕ್ಷರ ಗಾತ್ರ

ಸಿಂಧನೂರು: ‘ಭಾರತ ಹಲವಾರು ಯುದ್ಧಗಳನ್ನು ಗೆದ್ದಿದೆ. ಆದರೆ ಕಾರ್ಗಿಲ್ ಯುದ್ಧ ಐದಾರು ಸಾವಿರ ಅಡಿ ಎತ್ತರದ ಮೊನಚಾದ ಬೆಟ್ಟ ಗುಡ್ಡಗಳ ಕಠಿಣ ಶೀತ ಪ್ರದೇಶದಲ್ಲಿ ನಡೆದಿದೆ. ಆದ್ದರಿಂದ ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕವಾಗಿದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಅಭಿಪ್ರಾಯಪಟ್ಟರು.

ಇಲ್ಲಿಯ ಟೌನ್‌ಹಾಲ್‌ನಲ್ಲಿ ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿಯ ತಾಲ್ಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ ಹಾಗೂ ನಾಲ್ಕು ಮಹಾಯುದ್ಧಗಳಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪಾಕಿಸ್ತಾನಿ ಸೈನಿಕರನ್ನು ಬಗ್ಗು ಬಡಿದ ಭಾರತೀಯ ಸೈನಿಕರು ಜುಲೈ 24ರಂದು ಅವರನ್ನು ಹಿಮ್ಮೆಟ್ಟಿಸಿ ಯುದ್ಧ ಗೆದ್ದರು. ಇದಾದ ಬಳಿಕ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತಿದೆ’ ಎಂದರು.

ಬಿಜೆಪಿ ಮುಖಂಡ ಕೆ.ಕರಿಯಪ್ಪ, ಸಾನ್ನಿಧ್ಯ ವಹಿಸಿದ್ದ ವೆಂಕಟಗಿರಿ ಕ್ಯಾಂಪ್‌ನ ಸಿದ್ಧಾಶ್ರಮದ ಸದಾನಂದ ಶರಣರು, ಯುವ ಮುಖಂಡ ಸುರೇಶ ಹಚ್ಚೋಳ್ಳಿ ಮಾತನಾಡಿದರು.

ನಿವೃತ್ತ ಯೋಧರಾದ ವೀರೇಶ ಯಾದವ, ಸುರೇಶ ಎಂ, ನಾಗರಾಜ ತುರ್ವಿಹಾಳ, ನರಸಿಂಹರಾವ್, ಅಮರೇಶ ಅಲಬನೂರು, ಬಸವರಾಜ ಕೋರ್ಟ್, ಈರಯ್ಯಸ್ವಾಮಿ, ಮಹಾಂತೇಶಸ್ವಾಮಿ, ಸಲೀಂ, ಮಹ್ಮದ್ ರಫಿ, ಹನುಮಂತಪ್ಪ ಕಾರಟಗಿ, ಸುಬ್ರಮಣ್ಯಂ, ಬಿಎಸ್‌ಎಫ್ ಯೋಧ ವೀರೇಶ ಕನ್ನೇರ್ ಅವರನ್ನು ಸನ್ಮಾನಿಸಲಾಯಿತು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸುಮಿತ್ ತಡಕಲ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಗೋಡಿಹಾಳ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಾಸಲಮರಿ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಹುಲುಗಯ್ಯ, ಸಮಾಜ ಸೇವಕಿ ಲಕ್ಷ್ಮಿ ಪತ್ತಾರ, ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ವೀರಭದ್ರಯ್ಯಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಗೋನವಾರ, ಕಲ್ಯಾಣ ಕರ್ನಾಟಕ ಗೌರವಾಧ್ಯಕ್ಷ ಯಂಕಯ್ಯ ಶೆಟ್ಟಿ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ ಕೋಟೆ ಹಾಜರಿದ್ದರು.

ಸಿದ್ದೇಶ್ವರಿ ನಿರೂಪಿಸಿದರು. ಬಸವರಾಜ ಮೋತಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT