ನಗರೋತ್ಥಾನ ಯೋಜನೆಯ ಕಾಮಗಾರಿಗಳ ಗುಣಮಟ್ಟ ತಪಾಸಣೆಗೆ ನಿಯೋಜನೆಗೊಂಡ ಖಾಸಗಿ ಏಜನ್ಸಿಗೆ ವರ್ಷದಿಂದ ಹಣ ಪಾವತಿಯಾಗದ ಕಾರಣ ಅವರು ಮುಂದೆ ಬರುತ್ತಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರ ಸಮಸ್ಯೆ ಬಗೆ ಹರಿಯಲಿದೆ ಎಂಬ ವಿಶ್ವಾಸ ಇದೆ
ಶಂಕರನಾಯಕ ಇಇ ಲೋಕೋಪಯೋಗಿ ಇಲಾಖೆ ರಾಯಚೂರು
ಕಾಮಗಾರಿಯ ಗುಣಮಟ್ಟದ ಮೂರನೇ ತಂಡದ ತಪಾಸಣೆಗೆ ಸರ್ಕಾರದಿಂದ ಟೆಂಡರ್ ಆಗಿ ಏಜನ್ಸಿಯೊಂದಿಗೆ ಒಪ್ಪಂದ ಆಗಿತ್ತದೆ. ಹಣ ಪಾವತಿಯಾಗಿಲ್ಲ ಎಂಬ ನೆಪಮಾಡಿ ತಪಾಸಣೆ ಮಾಡದೇ ಇರುವುದು ತಪ್ಪು ಸರ್ಕಾರ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯಾರ್ಥ ಪಡಿಸಲಿ
ಬಲವಂತರಾಯ ವಟಗಲ್ ಅಧ್ಯಕ್ಷ ತಾಲ್ಲೂಕು ಗುತ್ತಿಗೆದಾರರ ಸಂಘ ಮಸ್ಕಿ