ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್: ಸೊಳ್ಳೆಗಳ ಕಾಟಕ್ಕೆ ಬೇಸತ್ತ ಶಾಲಾ ಮಕ್ಕಳು

Published : 5 ಅಕ್ಟೋಬರ್ 2024, 15:54 IST
Last Updated : 5 ಅಕ್ಟೋಬರ್ 2024, 15:54 IST
ಫಾಲೋ ಮಾಡಿ
Comments

ಮುದಗಲ್: ಇಲ್ಲಿಗೆ ಸಮೀಪದ ಹೂನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಮಕ್ಕಳಿಗೆ ತೊಂದರೆ ನೀಡುತ್ತಿವೆ ಎಂದು ಪಾಲಕ ಬಸವರಾಜ ತಿಳಿಸಿದ್ದಾರೆ.

ಮಳೆ ಬಂದಾಗ ಆವರಣದಲ್ಲಿ ನೀರು ನಿಲ್ಲುತ್ತದೆ. ಆಗ ಆವರಣ ಕೆಸರು ಗದ್ದೆಯಂತಾಗುತ್ತದೆ. ನೀರು ಮಲೀನವಾಗಿ ಸೊಳ್ಳೆಗಳು ಹುಟ್ಟಿಕೊಂಡಿವೆ. ಸೊಳ್ಳೆಗಳ ಕಾಟಕ್ಕೆ ಮಕ್ಕಳು ಬೇಸತ್ತಿದ್ದಾರೆ. ಸೊಳ್ಳೆ ಕಚ್ಚಿಸಿಕೊಂಡ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಪಾಲಕರು ಹೇಳಿದ್ದಾರೆ.

ಅನಾರೋಗ್ಯಕ್ಕೆ ತುತ್ತಾದ ಮಕ್ಕಳು ಆಸ್ಪತ್ರೆಗಳಿಗೆ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು ತರಗತಿ ಕೊಠಡಿಗಳಿಗೆ ಹೋಗಲು ಮತ್ತು ಆಟ ಆಡಲು ತುಂಬಾ ತೊಂದರೆಯಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲಾ ಆವರಣದಲ್ಲಿ ಮರಂ ಹಾಕಿಸಿ ಮಳೆ ನೀರು ಮುಂದೆ ಹೋಗುವಂತೆ ಮಾಡಬೇಕು. ಶಾಲೆಯ ಕಿಟಕಿ ಹಾಗೂ ಬಾಗಿಲು ದುರಸ್ತಿ ಮಾಡಿಸಬೇಕು. ಶಾಲೆಗೆ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT