ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಮಾಜ ಪರಿವರ್ತನೆಗೆ ಸಾಹಿತ್ಯ ಪ್ರೇರಕ ಶಕ್ತಿ’

ಸಾಹಿತ್ಯ ದಸರಾಕ್ಕೆ ಚಾಲನೆ, ಕಲ್ಯಾಣ ಕರ್ನಾಟಕ ದಸರಾ ಕವಿಗೋಷ್ಠಿ
Published : 6 ಅಕ್ಟೋಬರ್ 2024, 14:46 IST
Last Updated : 6 ಅಕ್ಟೋಬರ್ 2024, 14:46 IST
ಫಾಲೋ ಮಾಡಿ
Comments

ಸಿಂಧನೂರು: ಸಮಾಜ ಪರಿವರ್ತನೆಗೆ ಸಾಹಿತ್ಯ ಪ್ರೇರಕ ಶಕ್ತಿಯಾಗಿದೆ. ಬೆಳಕಿನಷ್ಟೇ ಕವಿಗಳ ಬರವಣಿಗೆ ಪ್ರಖರವಾಗಿ ಸಮಾಜದ ಅಂಕು-ಡೊಂಕು ತಿದ್ದಬೇಕು ಎಂದು ಸ್ಥಳೀಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಜಾಜಿ ದೇವೇಂದ್ರಪ್ಪ ಹೇಳಿದರು.

ನಗರದ ಟೌನ್ ಹಾಲ್‌ನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ನಗರ ಯೋಜನಾ ಪ್ರಾಧಿಕಾರ ಹಾಗೂ ನಾಗರಿಕ ಸಮಿತಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಂಧನೂರು ದಸರಾ ಉತ್ಸವದ ಅಂಗವಾಗಿ ಸಾಹಿತ್ಯ ದಸರಾ ಹಾಗೂ ಕಲ್ಯಾಣ ಕರ್ನಾಟಕ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ರಾಯಚೂರು ಜಿಲ್ಲೆಯಲ್ಲಿ ವಚನ, ದಾಸ, ಸೂಫಿ ಸಂತರ ಸಾಹಿತ್ಯ ಸಮೃದ್ದವಾಗಿದೆ. ಅಂಬಾಮಠದ ಚಿದಾನಂದ ಅವಧೂತರ ಕಾವ್ಯ ಮನೆ-ಮನಗಳಲ್ಲಿದೆ ಎಂದರು.

ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಖಾದರಬಾಷ ಮಾತನಾಡಿ, ತಳ ಸಂಸ್ಕೃತಿ ಹಾಗೂ ಸಮಾಜದ ಕಟ್ಟಕಡೆಯ ಜನಾಂಗದವರ ಪರವಾಗಿ ಸಾಹಿತ್ಯದ ಮೂಲಕ ದನಿಯಾಗುವವರು ಮಾತ್ರ ನೈಜ ಕವಿಗಳು ಮತ್ತು ಸಾಹಿತಿಗಳು ಎಂದು ಹೇಳಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಎಲ್ಲ ರಂಗದಲ್ಲೂ ಸಾಹಿತಿಗಳು ಇದ್ದು, ಅವರನ್ನು ಗುರುತಿಸುವ ನಿಟ್ಟಿನಲ್ಲಿ ಈ ದಸರಾ ಕವಿಗೋಷ್ಠಿ ಆಯೋಜಿಸಲಾಗಿದೆ. ಜನರ ಬದುಕಿನ ತಲ್ಲಣಗಳ ಕುರಿತು ಸಾಹಿತ್ಯ ರಚನೆಯಾಗಲಿ. ಸಾಹಿತ್ಯದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಾಂತೇಶ ಮಸ್ಕಿ, ಜನಕವಿ ರಮೇಶ ಗಬ್ಬೂರು ಮಾತನಾಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲ್ಲೂಕು ಪಂಚಾಯತಿ ಇಓ ಚಂದ್ರಶೇಖರ, ನಿವೃತ ಶಿಕ್ಷಣಾಧಿಕಾರಿ ಹೆಚ್.ಜಿ.ಹಂಪಣ್ಣ, ಸಾಹಿತಿಗಳಾದ ಎಸ್.ಎಸ್.ಹಿರೇಮಠ, ವೀರನಗೌಡ ಗುಮಗೇರಾ, ಕರಿಬಸಯ್ಯ ಹಿರೇಮಠ, ವೆಂಕನಗೌಡ ವಟಗಲ್, ಬೀರಪ್ಪ ಶಂಭೋಜಿ, ಅಮರಗುಂಡಪ್ಪ ಹುಲ್ಲೂರು, ವಿ.ಸಿ.ಪಾಟೀಲ್, ವಲಿಪಾಷಾ, ಮಧುಮತಿ ದೇಶಪಾಂಡೆ, ರಮಾದೇವಿ ಶಂಭೋಜಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಪಂಪಯ್ಯಸ್ವಾಮಿ ಸಾಲಿಮಠ ಉಪಸ್ಥಿತರಿದ್ದರು.

ಎಸ್.ದೇವೇಂದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ಹಿರೇಮಠ ಹಾಗೂ ಬಸವರಾಜ ಗಸ್ತಿ ರೈತಗೀತೆ ಹಾಡಿದರು. ಸ್ವಾಗತಿಸಿದರು. ಡಾ.ಹುಸೇನಪ್ಪ ಅಮರಾಪುರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT