ರಾಯಚೂರು: ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ 40ನೇ ಪುಣ್ಯಸ್ಮರಣೆ ನಿಮಿತ್ತ ಈಚೆಗೆ ಅಹೋರಾತ್ರಿ ಸಂಗೀತ ಸಮ್ಮೇಳನ ನಡೆದು ಸಂಗೀತಪ್ರಿಯರಿಗೆ ರಸದೌತಣ ನೀಡಿದವು.

ಕಿಲ್ಲೇ ಬೃಹನ್ಮಠ ಶಾಂತಮಲ್ಲ ಶಿವಾಚಾರ್ಯ, ಹಿರೇಮಠದ ರಾಚೋಟಿ ವೀರ ಶಿವಾಚಾರ್ಯ ಮತ್ತು ಗಬ್ಬೂರ ಶ್ರೀಮಠದ ಬೂದಿ ಬಸವೇಶ್ವರ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.

ಸಂಗೀತ ಬಳಗ ಸಂಘದ ಗೌರವಾದ್ಯಕ್ಷ ನರಸಿಂಹಲು ವಡವಾಟಿ , ಅಧ್ಯಕ್ಷ ಸೂಗೂರೇಶ ಅಸ್ಕಿಹಾಳ, ಉಪಾಧ್ಯಕ್ಷ ಸೂಗೂರಯ್ಯ ಸ್ವಾಮಿ, ಕಾರ್ಯದರ್ಶಿ ಇಬ್ರಾಹಿಂ, ಕೋಶಾಧ್ಯಕ್ಷ ವೆಂಕಟೇಶ ಆಲ್ಕೋಡ್ ಮತ್ತು ವಿಜಯಕುಮಾರ ದಿನ್ನಿ, ಸಿದ್ದಯ್ಯ ಸ್ವಾಮಿ ಕವಿತಾಳ ಇದ್ದರು.

ವಿಶೇಷ ಕಲಾವಿದರಾಗಿ ಆಗಮಿಸಿದ್ದ ಶಶಿಕಲಾ ದಾನಿ ರವರು ಜಲತರಂಗವೆಂಬ ವಿಶೇಷ ವಾದ್ಯ ಬಳಸಿಕೊಂಡು ರಾಗ್ ಮಾರೋ ಬಿಹಾಗದೊಂದಿಗೆ

ಅದ್ಭುತ ಕೈ ಚಳಕದಿಂದ ಜನರ ಮನಸೊರೆಗೊಂಡರು. ಪೂನಾದ ಸುರಂಜನ್ ಖಂಡಲ್ಕರ್ ಅವರ ಜೋಗ್ ರಾಗ ಮತ್ತು ಠುಮ್ರಿ ರಾಗದಲ್ಲಿ ಸಂಗೀತ ಪ್ರಿಯರನ್ನು ತಣಿಸಿತು.

ಬೆಂಗಳೂರಿನ ಸ್ನೇಹ ಮತ್ತು ಆರ್ಯ ಅವರ ಬಾನ್ಸುರಿಯಲ್ಲಿ ಮಾಲಕಂಸ್, ಪಹಡಿ ಧುನ್ ನುಡಿಸುವ ಮೂಲಕ ಚಪ್ಪಾಳೆಗಳ ಸುರಿಮಳೆ ಹರಿಯಿತು. ಬೆಳಗಾವಿಯ ರಾಜಪ್ರಭು ದೋತ್ರೆ ಜವಾರಿ ಗಟ್ಟಿ ಕಂಠದ ಮೂಲಕ ರಾಗ ಗೋರಖ್ ಕಲ್ಯಾಣ ಮತ್ತು ಹೇಮರೆಡ್ಡಿ ಮಲ್ಲಮ್ಮ ನಾಟಕದ ಆಹಾ ಮಮತೆ ಮಾತೆ ಹಾಡು ನೆರೆದಿದ್ದ ಜನಸ್ತೋಮದ ಮೆಚ್ಚುಗೆ ಗಳಿಸಿತು.

ಸಂಗೀತ ಕಲಾವಿದರಿಗೆ ಗೋನವಾರ ಮಹಾಂತಯ್ಯ ಸ್ವಾಮಿ, ವಿ.ಎಂ.ಜೋಷಿ , ವೆಂಕಟೇಶ ಆಲ್ಕೋಡ್ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಪಂಡಿತ್ ವಿಶ್ವನಾಥ ನಾಕೋಡ್, ಗೋಪಾಲ ಗುಡಿಬಂಡೆ ರಾಘವೇಂದ್ರ ಆಶಾಪೂರು, ಶಿವರಾಜ ನೆಲಕೋಳ ಅದ್ಭುತವಾಗಿ ತಬಲಾ ನುಡಿಸಿದರು.

ಸಂಗೀತ ಸಮ್ಮೇಳನದಲ್ಲಿ ಸುಧಾಕರ ಅಸ್ಕಿಹಾಳ, ವಿಜಯ ಕುಮಾರ ದಿನ್ನಿ, ಸಿದ್ದಯ್ಯ ಸ್ವಾಮಿ ಕವಿತಾಳ ಹಾಗೂ ತಂಡ ವ್ಯವಸ್ಥೆಯ ರೂವಾರಿಯಾಗಿದ್ದರು.

ಇದೇ ಸಂದರ್ಭದಲ್ಲಿ, ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್, ಸಾಹಿತಿ ಅಯ್ಯಪ್ಪ ತುಕ್ಕಾಯಿ, ತಬಲಾ ಕಲಾವಿದ ತಿಮ್ಮಾರೆಡ್ಡಿ ಅವರಿಗೆ ಮೌನಾಚರಣೆಯ ಗೌರವ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.