ಸಿಂಧನೂರಿನ ವಾರ್ಡ್ ನಂ.19ರ ಶರಣಬಸವೇಶ್ವರ ಕಾಲೊನಿಯಲ್ಲಿರುವ ಮಹಿಳಾ ಶೌಚಾಲಯದ ಹಿಂಬದಿಯ ಸುಣ್ಣದ ಹಳ್ಳದಲ್ಲಿ ಚರಂಡಿ ನೀರು ಕಸದರಾಶಿ ಬಿದ್ದು ದುರ್ನಾತ ಪ್ರದೇಶವಾಗಿರುವುದು
‘ಅರ್ಥಿಂಗ್ ಸಮಸ್ಯೆ ನಿವಾರಣೆ ಸೇರಿದಂತೆ ಹೊಸ ನಳಗಳ ಜೋಡಣೆ, ನೀರಿನ ಸರಬರಾಜಿಗಾಗಿ ಪೈಪ್‍ಲೈನ್‍ಗಳ ಜೋಡಣೆ ಕೆಲಸಗಳನ್ನು ಮಾಡಲಾಗುತ್ತಿದೆ. ಇನ್ನೂ ಸುಣ್ಣ ಬಣ್ಣ ಬಳೆಯುವ ಕೆಲಸ ಬಾಕಿಯಿದೆ. ಒಂದು ವಾರದಲ್ಲಿ ಈ ಶೌಚಾಲಯ ಆರಂಭಿಸಲಾಗುವುದು.
-ಎಚ್.ಬಾಷಾ ಸದಸ್ಯ ನಗರಸಭೆ
ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಕುರಿತು ತಮ್ಮ ಗಮನಕ್ಕಿಲ್ಲ. ತಕ್ಷಣವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಜೊತೆಗೆ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಲಾಗುವುದು.
- ಮಂಜುನಾಥ ಗುಂಡೂರು, ಪೌರಾಯುಕ್ತ ನಗರಸಭೆ
ನೂರಾನಿ ಮಸ್ಜೀದ್ ಹತ್ತಿರ ಆರು ತಿಂಗಳಾದರೂ ಚರಂಡಿ ತ್ಯಾಜ್ಯ ತೆಗೆದಿರಲಿಲ್ಲ. ಮೊನ್ನೆ ವಿಲೇವಾರಿ ಮಾಡಿದ್ದಾರೆ. ಈ ಶೌಚಾಲಯ ಸಮಸ್ಯೆ ನಾಲ್ಕೈದು ವರ್ಷಗಳಿಂದ ಇದೆ. ಅನೇಕ ಬಾರಿ ನಗರಸಭೆ ಅಧಿಕಾರಿಗಳ, ಸದಸ್ಯರ ಗಮನಕ್ಕೆ ತರಲಾಗಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಈಗ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಶೌಚಕ್ಕಾಗಿ ಜಾಲಿ ಗಿಡಗಳನ್ನು ಹುಡುಕಬೇಕಾದ ದುಸ್ಥಿತಿಯಿದೆ.