ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷೋತ್ಪಾದನೆ ವಿರುದ್ಧ ಮೌಲ್ಯೋತ್ಪಾದನೆ ಅಗತ್ಯ: ಅರುಣ್ ಕವಣಾಪುರ

ಹಿಂದಿ ಅನುವಾದಿತ ಕೃತಿ ‘ವ್ಯಾಘ್ರವೇಷಿ‘ ಬಿಡುಗಡೆಯಲ್ಲಿ ಕವಿ ಅರುಣ್ ಅಭಿಪ್ರಾಯ
Published : 27 ಮೇ 2024, 6:16 IST
Last Updated : 27 ಮೇ 2024, 6:16 IST
ಫಾಲೋ ಮಾಡಿ
Comments
ಅನುವಾದದಿಂದ ಯಾವುದೇ ಭಾಷೆಯ ಸಾಹಿತ್ಯ ಲೋಕ ಸಾಹಿತ್ಯವಾಗುತ್ತಾ ಹೋಗುತ್ತದೆ. ಒಂದು ನೆಲದ‌ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತೊಂದು ನೆಲದವರಿಗೆ ಪರಿಚಯಿಸುವಲ್ಲಿ ಅನುವಾದ ಮಹತ್ವದ ಪಾತ್ರ ವಹಿಸುತ್ತದೆ
– ಡಾ. ಎನ್. ದೇವರಾಜ್ ‘ವ್ಯಾಘ್ರವೇಷಿ’ ಕೃತಿ ಅನುವಾದಕ
‘ಶಾಲಾ–ಕಾಲೇಜುಗಳಲ್ಲಿ ಪ್ರದರ್ಶನ ಕಾಣಲಿ’
‘ಜಾನಪದ ಕಥನದ ಎಳೆಯನ್ನು ಆಧುನಿಕತೆಗೆ ಒಗ್ಗಿಸಿ ಮೂಲ ಸೊಗಡಿಗೆ ಧಕ್ಕೆಯಾಗದಂತೆ ಅದಕ್ಕಿರುವ ಸಕಾಲಿಕತೆಯ ಮಹತ್ವವವನ್ನು ಬೈರೇಗೌಡರು ತಮ್ಮ ನಾಟಕದಲ್ಲಿ ಹೇಳಿದ್ದಾರೆ. ಈ‌ ಪುಸ್ತಕವು ಹಿಂದಿ ಬೋಧಕರ ಕೈಗೆ ತಲುಪಿ ಶಾಲಾ- ಕಾಲೇಜುಗಳಲ್ಲಿ ಪ್ರದರ್ಶನವಾಗಬೇಕು. ಆ ಕಾರ್ಯಕ್ಕೆ ನಾನು‌ ಸಹ ಕೈ ಜೋಡಿಸುವೆ’ ಎಂದು ಅನುವಾದಿತ ಕೃತಿ ಕುರಿತು ಮಾತನಾಡಿದ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಡೀನ್ ಡಾ. ಮೈಥಿಲಿ ಪಿ. ರಾವ್ ಅಭಿಪ್ರಾಯಪಟ್ಟರು. ‘ಹಿಂದಿ ಮತ್ತು ಕನ್ನಡ ಭಾಷೆಯ ವ್ಯಾಕರಣದಲ್ಲಿ ಸಾಮ್ಯತೆ ಇದೆ. ಆದರೆ ಜಾನಪದ ಸಾಹಿತ್ಯ ಅನುವಾದ ಮಾಡುವಾಗ ವ್ಯತ್ಯಾಸ ಕಾಣುತ್ತೇವೆ. ಅದೆಲ್ಲವನ್ನೂ ಡಾ. ಎನ್. ದೇವರಾಜ್ ಅವರು ಅಳೆದು ತೂಗಿ ಕೃತಿಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ‌ ಹಿಂದಿಗೆ ಅ‌ನುವಾದಿಸಿದ್ದಾರೆ. ಸಮಾಜದಲ್ಲಿ ನಕಾರಾತ್ಮಕ ಅಂಶಗಳಷ್ಟೇ ಸಕಾರಾತ್ಮಕ ಅಂಶಗಳಿವೆ. ಈ ಅಂಶಗಳಿಗೆ ಒತ್ತು ನೀಡುತ್ತಾ ಸಮಾಜದ ಸ್ವಾಸ್ಥ್ಯ ಕಾಯುವ ಜವಾಬ್ದಾರಿ ಕೃತಿಕಾರನ ಮೇಲಿದ್ದು ಬೈರೇಗೌಡರು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT