ರಾಮನಗರ: ಕೆಎಸ್ಆರ್ಟಿಸಿ ನೌಕರರ ಮುಷ್ಕರವು 11ನೇ ದಿನವಾದ ಶನಿವಾರವೂ ಮುಂದುವರಿಯಿತು. ಈ ನಡುವೆ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರವೂ ಹೆಚ್ಚಾಗುತ್ತಿದೆ.

ರಾಮನಗರ–ಕನಕಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಗೆ ಹಳ್ಳಿಮಾರನಹಳ್ಳಿ ಬಳಿ ದುಷ್ಕರ್ಮಿಗಳು ಕಲ್ಲು ತೂರಿದ್ದು, ಗಾಜು ಪುಡಿ ಪುಡಿಯಾಯಿತು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಮುಷ್ಕರದ ನಡುವೆಯೂ ಬಸ್ಗಳ ಸಂಚಾರಕ್ಕೆ ಅಧಿಕಾರಿಗಳು ಪರ್ಯಾಯ ಕ್ರಮ ಕೈಗೊಳ್ಳುತ್ತಿದ್ದಾರೆ.

ಜೊತೆಗೆ ಖಾಸಗಿ ಬಸ್ಗಳ ಓಡಾಟವೂ ಹೆಚ್ಚಿದ್ದು, ಜನರ ಬವಣೆ ಕೊಂಚ ತಪ್ಪಿದೆ. ರಾಮನಗರ ವಿಭಾಗದಲ್ಲಿ ಶನಿವಾರ ಒಟ್ಟು 120 ಬಸ್ಗಳು ಸಂಚರಿಸಿದವು.

ಈ ಪೈಕಿ ಕನಕಪುರ ಡಿಪೊ ಒಂದರಲ್ಲಿಯೇ 40 ಬಸ್ಗಳು ಸಂಚಾರ ಕೈಗೊಂಡವು. ಆನೇಕಲ್ ಡಿಪೊದಿಂದ 22, ಚನ್ನಪಟ್ಟಣದಿಂದ 15, ಹಾರೋಹಳ್ಳಿಯಿಂದ 14, ರಾಮನಗರದಿಂದ 16, ಮಾಗಡಿಯಿಂದ 13 ಬಸ್ಗಳು ಸಂಚರಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.