ರಾಮನಗರ: ತಾಲ್ಲೂಕಿನ ನಿಜಿಯಪ್ಪನದೊಡ್ಡಿ ಗ್ರಾಮದಲ್ಲಿ ಬುಧವಾರ ವಿದ್ಯುತ್ ಸ್ಪರ್ಶದಿಂದಾಗಿ ಇಬ್ಬರು ಮೃತಪಟ್ಟರು.

ನಿಜಿಯಪ್ಪನದೊಡ್ಡಿ ರೈತ ರಾಮು (50) ಹಾಗೂ ರಾಮನಗರದ ಕೊತ್ತೀಪುರ ನಿವಾಸಿ ಚಂದ್ರು (40) ಮೃತರು. ಈ ಇಬ್ಬರು ಸೇರಿ ಗ್ರಾಮದ ಮಧ್ಯಾಹ್ನ 2.30ರ ವೇಳೆಗೆ ಹೊಲದಲ್ಲಿನ ಬೋರ್ ವೆಲ್ ಮೋಟಾರ್ ದುರಸ್ತಿ ಕಾಮಗಾರಿ ಕೈಗೊಂಡಿದ್ದರು. ಈ ಸಂದರ್ಭ ಕೊಳವೆ ಬಾವಿಯ ಪೈಪ್ಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ತಗುಲಿತು. ಮೋಟಾರ್ ದುರಸ್ತಿ ವಾಹನಕ್ಕೂ ವಿದ್ಯುತ್ ಪ್ರವಹಿಸಿದ್ದು, ಅದನ್ನು ಸ್ಪರ್ಶಿಸಿ ಇಬ್ಬರೂ ವಿದ್ಯುತ್ ಆಘಾತದಿಂದ ಮೃತಪಟ್ಟರು. ದುರಸ್ತಿ ವಾಹನಕ್ಕೂ ಬೆಂಕಿ ತಗುಲಿತು.

ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಗಳ ಮುಂದೆ ಎರಡೂ ಕುಟುಂಬದವರ ಆಕ್ರಂದನ ಮನ ಕಲಕುವಂತೆ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.