ಕನಕಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನದ ಸರ ಸೇರಿ ಸುಮಾರು 90 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದೆ. ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮುಳ್ಳಹಳ್ಳಿ ಗ್ರಾಮದ ಸುಮಿತ್ರಾ ಚಿನ್ನಾಭರಣ ಕಳೆದುಕೊಂಡವರು.

ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮದುವೆಗೆ ಹೋಗುವುದಕ್ಕಾಗಿ ಸುಮಿತ್ರಾ ಅವರು, ಕನಕಪುರದ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಎಸ್ಆರ್ಟಿಸಿ ಬಸ್ ಹತ್ತಿಕೊಂಡು ಹೊರಟಿದ್ದರು. ತಮ್ಮ ಬ್ಯಾಗಿನಲ್ಲಿ 90 ಗ್ರಾಂ ಒಡವೆ ಮತ್ತು ಮೊಬೈಲ್ ಇಟ್ಟುಕೊಂಡಿದ್ದರು.

ಬೆಂಗಳೂರಿನ ನೈಸ್ ರಸ್ತೆ ಬಳಿ ಇರುವ ರೇಷ್ಮೆ ಇಲಾಖೆ ಬಳಿ ಬಸ್ನಿಂದ ಇಳಿದ ಸುಮಿತ್ರಾ ಅವರು, ತಮ್ಮ ಬ್ಯಾಗ್ ನೋಡಿಕೊಂಡಾಗ ಜಿಪ್ ತೆರೆದಿತ್ತು. ಕೂಡಲೇ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನಾಭರಣ ಮತ್ತು ಮೊಬೈಲ್ ಕಳ್ಳತನವಾಗಿರುವುದು ಗೊತ್ತಾಯಿತು.

ನಂತರ ಕನಕಪುರಕ್ಕೆ ಬಂದ ಅವರು, ಪಟ್ಟಣದ ಪೊಲಿಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.