ರಾಮನಗರ: ನಗರದ ವಾರ್ಡ್ 31ರ ಅರ್ಚಕರಹಳ್ಳಿಯ ವಿಜಯಕುಮಾರ್ ವಿ. ಎಂಬುವವರು ತಮ್ಮ ಹಳ್ಳಿಕಾರ್ ಹೋರಿಯ ಜನ್ಮದಿನವನ್ನು ಶುಕ್ರವಾರ ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಎಂಟು ವರ್ಷಗಳನ್ನು ಪೂರೈಸಿ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿರುವ ತಮ್ಮ ನೆಚ್ಚಿನ ಹೋರಿಯನ್ನು ಸ್ವಚ್ಛಗೊಳಿಸಿದ ವಿಜಯಕುಮಾರ್ ಅವರು ಅದಕ್ಕೆ ಹೂವಿನ ಹಾರ ಹಾಕಿ, ಕುಂಕುಮವಿಟ್ಟು ಸಿಂಗರಿಸಿದ್ದಾರೆ. ನಂತರ 5 ಕೆ.ಜಿ ಕೇಕ್ ತಂದು ತಮ್ಮ ಕುಟುಂಬದವರ ಸಮ್ಮುಖದಲ್ಲಿ ಕತ್ತರಿಸಿ ಹೋರಿಗೆ ತಿನ್ನಿಸಿದರು.

ವಿಜಯಕುಮಾರ್ ಅವರ ತಾಯಿ ಹೇಮಲತಾ ಅವರು ಹೋರಿಗೆ ಪೂಜೆ ಮಾಡಿ, ಆರತಿ ಬೆಳಗಿ ಜನ್ಮದಿನದ ಶುಭ ಕೋರಿದರು. ನಂತರ ಅಕ್ಕಪಕ್ಕದ ಮನೆಯವರಿಗೆ ಕೇಕ್ ಹಂಚಿಕೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು.

‘ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿರುವ ನೆಚ್ಚಿನ ಹಳ್ಳಿಕಾರ್ ಹೋರಿ 2015ರ ಏಪ್ರಿಲ್ 28ರಂದು ಜನಿಸಿತ್ತು. ಅಂದಿನಿಂದಲೂ ಅದರ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡು ಬಂದಿದ್ದೇವೆ. ಈ ಸಲ 5 ಕೆ.ಜಿ ಕೇಕ್ ತರಿಸಿ ಆಚರಿಸಿದೆವು. ದನಕರುಗಳು ಮನೆಗೆ ಲಕ್ಷ್ಮಿ ಇದ್ದಂತೆ. ಅದರಲ್ಲೂ ಹಳ್ಳಿಕಾರ್ ಹೋರಿ ಮತ್ತು ಹಸುಗಳು ಕುಟುಂಬಕ್ಕೆ ಆರ್ಥಿಕ ಬಲ ತಂದು ಕೊಡುತ್ತವೆ’ ಎಂದು ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.