ಮಾಗಡಿ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಸತತ ಮಳೆಯಿಂದ ಕೆರೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದು, ಕೆರೆಯಲ್ಲಿ ಬಿಟ್ಟಿದ್ದ ಮೀನು ಕೆರೆ ಕೋಡಿಯಾದ ಹಿನ್ನೆಲೆಯಲ್ಲಿ ಮೀನುಗಳು ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.

ಕಳೆದ ಎರಡು ವರ್ಷಗಳ ಹಿಂದೆ ಮೀನುಗಾರಿಕೆ ಇಲಾಖೆ ಹರಾಜಿನಲ್ಲಿ ಕೆರೆಗಳನ್ನು ಮೀನು ಸಾಕಲು ಕೆಲವರು ಟೆಂಡರ್ ಪಡೆದಿದ್ದರು. ಅದರಂತೆ ಎರಡು ವರ್ಷಗಳಿಂದಲೂ ಮೀನು ಸಾಕಣಿಕೆ ಮಾಡುತ್ತಿದ್ದರು. ಈಗ ಕೆರೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದು, ಕೋಡಿ ಮೂಲಕ ಲಕ್ಷಾಂತರ ಮೀನಿನ ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೀನು ಸಾಕಣೆದಾರರು ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕಿನ ಬೆಳಗುಂಬ ಕೆರೆ ಹಾಗೂ ಕೆಂಪಸಾಗರ ಕೆರೆಗಳಿಗೆ ಈಚೆಗೆ ಲಕ್ಷಗಟ್ಟಲೆ ಮೀನಿನ ಮರಿಗಳನ್ನು ಬಿಡಲಾಗಿತ್ತು. ಈಗ ಬೆಳಗುಂಬ ಕೆರೆ ಮತ್ತು ಕೆಂಪಸಾಗರ ಕೆರೆ ಕೋಡಿ ಬಿದ್ದು ನೀರು ಹರಿದುಹೋಗಿದೆ. ಮೀನುಗಾರಿಕೆ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮೀನು ಹಿಡಿಯಲು ಕೆರೆಯ ಕೊಡಿಗೆ ಯಾವುದೇ ರೀತಿ ತಂತಿ ಬಲೆ ಹಾಗೂ ಮೆಸ್ ಹಾಕಬಾರದು ಎಂದು ಸಲಹೆ ನೀಡಿದ್ದಾರೆ.

ಇದರಿಂದ ಬೆಳೆದು ದಪ್ಪ ಆಗಿದ್ದ ಮೀನುಗಳು ಕೆರೆ ಕೊಡಿಯಲ್ಲಿ ಕೊಚ್ಚಿ ಹೋಗಿವೆ. ಇದರಿಂದ ಸಾಕಷ್ಟು ನಷ್ಟವಾಗಿದೆ. ಸರ್ಕಾರ ನಮ್ಮ ನೆರವಿಗೆ ಬಂದು ನಷ್ಟ ಸರಿದೂಗಿಸಬೇಕೆಂದ ಎಂದು ಮೀನು ಸಾಕಣೆದಾರರು ಒತ್ತಾಯಿಸಿದ್ದಾರೆ.

ಬೆಳಗುಂಬ ಕೆರೆ ಕೋಡಿಯಾಗಿ ಅಪಾರ ಪ್ರಮಾಣದ ನೀರು ಹೊರಬಂದಿದ್ದು, ತೊರೆಚೆನ್ನನಹಳ್ಳಿ ಸೇತುವೆ ಕೂಡ ಕೊಚ್ಚಿಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.