ರಾಮನಗರ: ವಿದ್ಯಾರ್ಥಿನಿಗೆ ವಾಟ್ಸಪ್ನಲ್ಲಿ ಆಕ್ಷೇಪಾರ್ಹ ಸಂದೇಶ ಕಳುಹಿಸಿದ ಆರೋಪದ ಮೇಲೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಆರ್. ರಾಮಕೃಷ್ಣ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಾಧ್ಯಾಪಕ ರಾತ್ರಿ ವೇಳೆ ಮೊಬೈಲ್ನಲ್ಲಿ ವಾಟ್ಸಪ್ ಮೂಲಕ ವಿದ್ಯಾರ್ಥಿನಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಕಾಲೇಜಿಗೆ ಬರುತ್ತಿದ್ದಂತೆ ಪ್ರಾಧ್ಯಾಪಕ ಕಾಲೇಜಿನಿಂದ ಕಾಲ್ಕಿತ್ತಿದ್ದಾರೆ.

ಈ ಹಿಂದೆಯೂ ಇದೇ ಪ್ರಾಧ್ಯಾಪಕರು ಬೇರೊಬ್ಬ ವಿದ್ಯಾರ್ಥಿನಿಗೆ ಇದೇ ರೀತಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದರು. ಇದರಿಂದ ಆ ವಿದ್ಯಾರ್ಥಿನಿ ಕಾಲೇಜು ತೊರೆದು ಬೇರೊಂದು ಕಾಲೇಜು ಸೇರಿದ್ದಳು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.