ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ‘ಖಜಾನೆ ತುಂಬಿಸಲು ದುಪ್ಪಟ್ಟು ದಂಡ’

Published 2 ಜುಲೈ 2024, 5:26 IST
Last Updated 2 ಜುಲೈ 2024, 5:26 IST
ಅಕ್ಷರ ಗಾತ್ರ

ಮಾಗಡಿ : ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ವಾಹನ ಸವಾರರಿಂದ ದುಪ್ಪಟ್ಟು ದಂಡ ಹಾಕುತ್ತಿದ್ದು ಇದನ್ನು ಪ್ರಶ್ನೆ ಮಾಡಿದಕ್ಕೆ ನನ್ನ ಮೇಲೆ ದೊಡ್ಡ ಅಪರಾಧ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಪ್ರಚಾರಗಿಟ್ಟಿಸಿಕೊಳ್ಳಲು ಪೊಲೀಸರನ್ನು ಪ್ರಶ್ನಿಸಿಲ್ಲ, ನನಗೂ ಸಾರಿಗೆ ನಿಯಮ, ಕಾನೂನು ಗೊತ್ತಿದೆ, ಮಾನವೀಯತೆಯೂ ಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನಾನೊಬ್ಬ ಜವಾಬ್ದಾರಿಯ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾರ ಮೇಲೂ ದರ್ಪ ನಡೆಸಿಲ್ಲ, ಕಾನೂನು ರೀತಿಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡುವವರಿಗೆ ದಂಡ ವಿಧಿಸುವುದನ್ನು ಬಿಟ್ಟು ಪಟ್ಟಣದ ಸುತ್ತಮುತ್ತಲೇ ಸ್ಥಳೀಯರನ್ನು, ರೈತರನ್ನು ಕೂಲಿ ಕಾರ್ಮಿಕರನ್ನೇ ಪೊಲೀಸರು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ದೂರಿದರು. 

ನನ್ನ ಅವಧಿಯಲ್ಲಿ ದಂಡ ವಿಧಿಸಲು ಅವಕಾಶ ಕೊಡುತ್ತಿರಲಿಲ್ಲ ಅವರಿವರ ಕೈಕಾಲು ಹಿಡಿದು ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತಿದ್ದೆ.

ಎಚ್.ಸಿ.ಬಾಲಕೃಷ್ಣ ಪಟ್ಟಣದಲ್ಲಿ ಮಂಡಿಯುದ್ದ ಬಿದ್ದಿರುವ ರಸ್ತೆಗುಂಡಿಗಳನ್ನು ಮೊದಲು ಮುಚ್ಚಿಸಿ ವಾಹನ ಸವಾರರು ಹಳ್ಳ, ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದನ್ನು ತಪ್ಪಿಸಲಿ ಎಂದರು.

ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲರಘು, ರಾಮು, ಅಶ್ವಥ್,ಕೆ.ಕೆ.ಕಾಂತರಾಜು, ಜೆಡಿಎಸ್ ಯುವ ಅಧ್ಯಕ್ಷ ವಿಜಯಕುಮಾರ್, ಡಿ.ಜಿ.ಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT