ನವದೆಹಲಿ: ರಾಜ್ಯಸಭೆಯ ಚೊಚ್ಚಲ ಭಾಷಣದಲ್ಲೇ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ್ದ ನಾಮನಿರ್ದೇಶಿತ ಸದಸ್ಯೆ ಸುಧಾಮೂರ್ತಿ ಅವರನ್ನು ನರೇಂದ್ರ ಮೋದಿ ಶ್ಲಾಘಿಸಿದರು.

ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮದ ಅಗತ್ಯವಿದೆ ಎಂದು ಸುಧಾಮೂರ್ತಿ ಸಲಹೆ ನೀಡಿದರು. ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದರು.

ಒಂಬತ್ತು ಮತ್ತು 14 ವರ್ಷದೊಳಗಿನ ಹುಡುಗಿಯರಿಗೆ ನೀಡಲು ಲಸಿಕೆ ಇದೆ. ಇದನ್ನು ಗರ್ಭಕಂಠದ ಲಸಿಕೆ ಎಂದು ಕರೆಯಲಾಗುತ್ತದೆ. ಹುಡುಗಿಯರು ಅದನ್ನು ತೆಗೆದುಕೊಂಡರೆ, ಕ್ಯಾನ್ಸರ್ ತಪ್ಪಿಸಬಹುದು ... ನಮ್ಮ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ನಾವು ಲಸಿಕೆಯನ್ನು ಉತ್ತೇಜಿಸಬೇಕು. ಏಕೆಂದರೆ, ಚಿಕಿತ್ಸೆಗಿಂತ ತಡೆಗಟ್ಟುವಿಕೆಯ ಉಪಕ್ರಮಗಳು ಮುಖ್ಯ’ ಎಂದು ಸುಧಾಮೂರ್ತಿ ಪ್ರತಿಪಾದಿಸಿದರು.

‘ಸರ್ಕಾರವು ಕೋವಿಡ್ ಸಮಯದಲ್ಲಿ ದೊಡ್ಡ ಲಸಿಕಾ ಅಭಿಯಾನ ನಡೆಸಿದೆ. ಆದ್ದರಿಂದ 9-14 ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಲಸಿಕೆ ನೀಡುವುದು ತುಂಬಾ ಕಷ್ಟಕರವಾಗುವುದಿಲ್ಲ. ಗರ್ಭಕಂಠದ ಲಸಿಕೆಯನ್ನು ಪಶ್ಚಿಮದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಕಳೆದ 20 ವರ್ಷಗಳಿಂದ ಬಳಸಲಾಗುತ್ತಿದೆ’ ಎಂದರು.

ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿ, 57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳೆಂದು ಪರಿಗಣಿಸಬೇಕು. ಇವುಗಳಲ್ಲಿ ಕರ್ನಾಟಕದ ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ, ಲಿಂಗರಾಜ ದೇವಾಲಯ ಸೇರಿವೆ ಎಂದರು.

‘ಮಹಿಳೆಯರ ಆರೋಗ್ಯದ ಕುರಿತು ವಿವರವಾಗಿ ಮಾತನಾಡಿದ ಸುಧಾ ಮೂರ್ತಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಮೋದಿ ಹೇಳಿದರು. ಆಗ ಸುಧಾಮೂರ್ತಿ ಎದ್ದು ನಿಂತು ಕೃತಜ್ಞತೆ ಸಲ್ಲಿಸಿದರು.

ಸುಧಾ ಮೂರ್ತಿ ಅವರು ತಾಯಂದಿರ ಕುರಿತು ಭಾವನಾತ್ಮಕವಾಗಿ ಆಡಿದ ಮಾತುಗಳನ್ನು ಪ್ರಸ್ತಾಪಿಸಿದ ಮೋದಿ, ‘ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಆದ್ಯತಾ ವಲಯವಾಗಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಗಮನ ಹರಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.