ರಾಮನಗರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ರೀಲರ್ಗಳು ಹೊರಗುಳಿದ ಕಾರಣ ಗೂಡು ಹರಾಜು ಪ್ರಕ್ರಿಯೆ ಅಸ್ತವ್ಯಸ್ತಗೊಂಡಿತು. ಇದನ್ನು ಖಂಡಿಸಿ ಬೆಳೆಗಾರರು ಗೂಡನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಗೆ ಗೂಡು ಚೆಲ್ಲಿದ ರೈತರು ಸರ್ಕಾರ ಹಾಗೂ ರೀಲರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೀಲರ್ ಗಳು ಯಾವುದೇ ಸೂಚನೆ ನೀಡದೇ ಏಕಾಏಕಿ ಹರಾಜಿನಿಂದ ಹಿಂದೆ ಉಳಿದಿರುವುದು ಸರಿಯಲ್ಲ. ಮಾರುಕಟ್ಟೆಗೆ ತಂದಿರುವ ಗೂಡನ್ನು ವಾಪಸ್ ಒಯ್ಯಲು ಆಗದು ಎಂದು ಅಸಮಾಧಾನ ತೋರಿದರು.

ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ವಾಹನಗಳನ್ನು ಬೇರೊಂದು ಮಾರ್ಗದಲ್ಲಿ ಕಳುಹಿಸಲಾಗುತ್ತಿದೆ.

ಮಾರುಕಟ್ಟೆ ಉಪ ನಿರ್ದೇಶಕ ಮುನ್ಶಿಬಸಯ್ಯ ಪ್ರತಿಕ್ರಿಯೆ ನೀಡಿ ' ಸರ್ಕಾರ ಬೇಡಿಕೆ ಈಡೇರಿಸದ ಕಾರಣ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ರೀಲರ್ಗಳು ತಿಳಿಸಿದ್ದಾರೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸದ್ಯ ಈ ಸಂಬಂಧ ಸಭೆ ನಡೆದಿದ್ದು, ಶೀಘ್ರ ಅಧಿಕಾರಿಗಳು ಪರಿಹಾರ ಹುಡುಕಲಿದ್ದಾರೆ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.