ರಾಮನಗರ: ತಾಲ್ಲೂಕಿನಲ್ಲಿ ಶನಿವಾರ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ಬೆಂಗಳೂರು–ಮೈಸೂರು ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆಯು ವಿವಿಧೆಡೆ ಜಲಾವೃತಗೊಂಡಿತು. ಮೊಣಕಾಲುತನಕ ನಿಂತ ನೀರಿನಿಂದಾಗಿ ವಾಹನ ಸವಾರರು ಮುಂದಕ್ಕೆ ಹೋಗಲಾಗದೆ ಪರದಾಡಿದರು.

ಸಂಜೆ 5ರ ಸುಮಾರಿಗೆ ಆರಂಭವಾದ ಮಳೆಯು ಮುಕ್ಕಾಲು ತಾಸು ಸುರಿಯಿತು. ಇದರಿಂದಾಗಿ, ತಾಲ್ಲೂಕಿನ ಕೆಂಪನಹಳ್ಳಿ ಗೇಟ್, ಬಸವನಪುರ, ಕಲ್ಲುಗೋಪಹಳ್ಳಿ, ದಾಸಪ್ಪನದೊಡ್ಡಿ ಬಳಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ಬದಿ ನಿರ್ಮಿಸಿರುವ ಚರಂಡಿಗಳು ತುಂಬಿ ಹರಿದಿದ್ದರಿಂದ ಮಳೆ ನೀರು ಕೆಳ ಸೇತುವೆ ಬಳಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿತು.

ಆಕ್ರೋಶ: ‘ಮಳೆ ಶುರುವಾದ ಕೆಲವೇ ನಿಮಿಷದಲ್ಲಿ ಕೆಳ ಸೇತುವೆಗಳ ಬಳಿ ನೀರು ಸಂಗ್ರಹಗೊಳ್ಳಲಾರಂಭಿಸಿತು. ನೀರಿನ ಮಟ್ಟ ಏರುತ್ತಲೇ ಇತ್ತು. ನಾವೆಲ್ಲರೂ ವಾಹನಗಳನ್ನು ನಿಲ್ಲಿಸಿಕೊಂಡು ಕಾಯಬೇಕಾಯಿತು. ರಸ್ತೆ ಜಲಾವೃಗೊಂಡಿರುವ ಕುರಿತು ಮಾಹಿತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ’ ಎಂದು ವಾಹನ ಸವಾರ ಕಾಕರಾನಹಳ್ಳಿಯ ಹೇಮಂತ್ ಆಕ್ರೋಶ ವ್ಯಕ್ತಪಡಿಸಿದರು.

‘ಹೆದ್ದಾರಿಯ ಪಹರೆ ವಾಹನವೂ ಇತ್ತ ಸುಳಿಯಲಿಲ್ಲ. ಮಳೆ ನಿಲ್ಲುವವರೆಗೆ ಸುಮಾರು ಮುಕ್ಕಾಲು ತಾಸು ಕಾದು, ನೀರಿನ ಪ್ರಮಾಣ ಇಳಿದ ಬಳಿಕ ಸಾಲುಗಟ್ಟಿ ನಿಂತಿದ್ದ ವಾಹನಗಳು ನಿಧಾನವಾಗಿ ಮುಂದಕ್ಕೆ ಸಾಗಿದವು. ಅಲ್ಲಿಯವರೆಗೆ ಪ್ರಾಧಿಕಾರದ ಯಾವ ಸಿಬ್ಬಂದಿಯೂ ಇತ್ತ ಸುಳಿಯಲಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಹೆದ್ದಾರಿ ಗುಣಮಟ್ಟದ ಬಂಡವಾಳ ಮಳೆ ಬಂದಾಗ ಬಯಲಾಗಿದೆ’ ಎಂದು ದೂರಿದರು.

ಮಳೆ ನಿಂತ ಬಳಿಕ ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ತುರ್ತು ಸಿಬ್ಬಂದಿ, ಚರಂಡಿಗಳಲ್ಲಿ ಕಟ್ಟಿಕೊಂಡಿದ್ದ ಕಸವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು.

ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ಜಲಾವೃತಗೊಂಡಿರುವುದು ಇದು ಮೊದಲೇನಲ್ಲ. ಇದೇ ಮಾರ್ಚ್ನಲ್ಲಿ ಮಳೆ ಸುರಿದಾಗ ವಿವಿಧೆಡೆ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ವಾಹನಗಳು ಅರ್ಧದಷ್ಟು ಮುಳುಗಡೆಯಾಗಿದ್ದವು. ಇದು ದೇಶದ ಗಮನ ಸೆಳೆದಿತ್ತು.

ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ಬದಿಯ ಚರಂಡಿಗಳಲ್ಲಿ ಕಸ ಮತ್ತು ಮಣ್ಣು ಕಟ್ಟಿಕೊಂಡಿದ್ದರಿಂದ ರಸ್ತೆ ಜಲಾವೃತಗೊಂಡಿದೆ. ಸ್ಥಳಕ್ಕೆ ಸಿಬ್ಬಂದಿಯನ್ನು ಕಳಿಸಿ ನೀರು ಹರಿದು ಹೋಗುವಂತೆ ಮಾಡಲಾಗಿದೆ
– ರಾಹುಲ್ ಗುಪ್ತಾ ಬೆಂ–ಮೈ ಹೆದ್ದಾರಿಯ ಯೋಜನಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

‘ಸಂಸದ ಸಿಂಹ ಬಂದು ನೋಡಲಿ’

ಜಲಾವೃತಗೊಂಡ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಕಾರಿನಲ್ಲಿ ಸಿಲುಕಿದ್ದ ಕಾಂಗ್ರೆಸ್ ಮುಖಂಡ ಗಾಣಕಲ್ ನಟರಾಜ್ ಅವರು ಸಂಗ್ರಹಗೊಂಡಿದ್ದ ನೀರಿನ ದೃಶ್ಯವನ್ನು ಚಿತ್ರೀಕರಿಸಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ತಾನು ನಿರ್ಮಾಣ ಮಾಡಿದ್ದು ಎಂದು ಕೊಚ್ಚಿಕೊಂಡಿದ್ದ ಹೆದ್ದಾರಿಯ ಸ್ಥಿತಿ ಇದು. ಕೇವಲ ಮುಕ್ಕಾಲು ತಾಸು ಸುರಿದ ಅಕಾಲಿಕ ಮಳೆಗೆ ಸರ್ವೀಸ್ ರಸ್ತೆ ಜಲಾವೃತಗೊಂಡಿದೆ. ಸಂಸದರು ತಾವು ನಿರ್ಮಾಣ ಮಾಡಿರುವ ರಸ್ತೆಯನ್ನೊಮ್ಮೆ ಬಂದು ನೋಡಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.