ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2023: ರಾಮನಗರ ಅಭಿವೃದ್ದಿಗೆ ಸಿಗುವುದೇ ವೇಗ?

‘ಮೇಕದಾಟು’ ಸಾಕಾರ ನಿರೀಕ್ಷೆ; ಕಾಡಾನೆ ಹಾವಳಿಗೆ ಬೇಕು ಶಾಶ್ವತ ಪರಿಹಾರ; ಕೈಗಾರಿಕಾಭಿವೃದ್ದಿಗೆ ಸಿಗುವುದೇ ಒತ್ತು
Published : 6 ಜುಲೈ 2023, 5:50 IST
Last Updated : 6 ಜುಲೈ 2023, 5:50 IST
ಫಾಲೋ ಮಾಡಿ
Comments
ರಾಮನಗರದ ರೇಷ್ಮೆಗೂಡು ಮಾರುಕಟ್ಟೆ
ರಾಮನಗರದ ರೇಷ್ಮೆಗೂಡು ಮಾರುಕಟ್ಟೆ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಉತ್ಪನ್ನಗಳಿಗೆ ಪೂರಕವಾದ ಸಂಸ್ಕರಣಾ ಘಟಕಗಳನ್ನು ಆರಂಭಿಸಬೇಕು. ಭೈರಾಪಟ್ಟಣದ ಮಾವು ಸಂಸ್ಕರಣಾ ಘಟಕ ಶೀಘ್ರ ಕಾರ್ಯಾರಂಭ ಮಾಡಬೇಕು. ಮಾರುಕಟ್ಟೆ ಹರಾಜು ಪದ್ಧತಿಯನ್ನು ತಡೆಯುವುದಕ್ಕಾಗಿ ಕನಿಷ್ಠ ಬೆಂಬಲ ಆಧಾರಿತ (ಎಂಎಸ್‌ಪಿ) ಮಾರುಕಟ್ಟೆ ಭದ್ರತೆ ಒದಗಿಸಬೇಕು. ಇದರಿಂದ ರೈತರ ಬೆಳೆಗೆ ತಕ್ಕ ಬೆಲೆ ಸಿಗಲಿದೆ.
–ಸಿ. ಪುಟ್ಟಸ್ವಾಮಿ, ರೈತ ಮುಖಂಡ
‘ನಿವೇಶನರಹಿತರಿಗೆ ಸೂರಿನ ಭಾಗ್ಯ ಸಿಗಲಿ’ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸಾವಿರಾರು ಮಂದಿ ನಿವೇಶನರಹಿತ ಬಡವರಿದ್ದಾರೆ. ಅಂತಹವರಿಗೆ ನಿವೇಶನ ಹಂಚುವುದಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ 10 ಎಕರೆ ಜಾಗ ಗುರುತಿಸಬೇಕು. ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸ್ಮಶಾನದ ಕೊರತೆ ನೀಗಿಸುವ ಬಗ್ಗೆ ಬಜೆಟ್‌ನಲ್ಲೇ ಘೋಷಣೆಯಾಗಬೇಕು. ಅರಣ್ಯ ಭೂಮಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದವರಿಗೆ ಸಾಗುವಳಿ ಪತ್ರ ವಿತರಿಸಬೇಕು.
– ಶಿವಕುಮಾರ ಸ್ವಾಮಿ, ದಲಿತ ಮುಖಂಡ ರಾಮನಗರ
ರಾಮನಗರವು ಜಿಲ್ಲಾ ಕೇಂದ್ರವಾಗಿ 15 ವರ್ಷವಾದರೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಯಾವುದೇ ವೇದಿಕೆ ಇಲ್ಲ. ಸಾಹಿತ್ಯ ಸಂಸ್ಕೃತಿ ಹಾಗೂ ಕಲೆಗಳಿಗೆ ಪೂರಕವಾಗಿ ರಂಗಮಂದಿರವನ್ನೊಳಗೊಂಡ ಒಂದು ಸಾಂಸ್ಕೃತಿಕ ಸಮುಚ್ಚವಯವನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಬೇಕು. ಕಲೆಗಳ ಪ್ರೋತ್ಸಾಹಕ್ಕೆ ಆರ್ಥಿಕ ಸಬಲತೆ ನೀಡಬೇಕು. ಕಲೆಗಳ ಉಳಿವಿಗಾಗಿ ಮೂಲ ಕಲಾವಿದರನ್ನು ಗುರುತಿಸಿ ಅವರಿಗೆ ಮನ್ನಣೆ ನೀಡಬೇಕಿದೆ. ಶಾಲಾ–ಕಾಲೇಜುಗಳಿವೆ ರಂಗ ಶಿಕ್ಷಕರನ್ನು ನೇಮಿಸಬೇಕು.
– ಡಾ. ಎಂ. ಭೈರೇಗೌಡ ಜಾನಪದ ವಿದ್ವಾಂಸ
ಹಾಲಿನ ದರ ನಿಗದಿಯನ್ನು ಸರ್ಕಾರ ನಿಗದಿಪಡಿಸುವ ಬದಲು ಹಾಲು ಮಹಾಮಂಡಳಗಳ ವಿವೇಚನೆಗೆ ಬಿಡಬೇಕು. ಗುಜರಾತ್ ಮತ್ತು ಕೇರಳದಲ್ಲಿರುವ ಮಾದರಿಯನ್ನು ಇಲ್ಲೂ ಅನುಸರಿಸಬೇಕು. ಹಾಲಿನ ಪ್ರೋತ್ಸಾಹಧನವನ್ನು ₹5ರಿಂದ ₹7ಕ್ಕೆ ಏರಿಕೆ ಮಾಡಬೇಕು. ಮಾರಾಟ ದರವನ್ನು ₹5 ಹೆಚ್ಚಿಸಬೇಕು. ಹೈನೋದ್ಯಮಕ್ಕೆ ಪೂರಕವಾಗಿ ಪಶು ಆಹಾರ ಕಾರ್ಖಾನೆ ಸ್ಥಾಪಿಸಬೇಕು. ಇದರಿಂದ ಪಶುಗಳ ಆರೋಗ್ಯ ವೃದ್ಧಿಯಾಗಿ ಹೆಚ್ಚಿನ ಹಾಲು ಸಿಗುತ್ತದೆ.
– ಪಿ. ನಾಗರಾಜ್ ಕೆಎಂಎಫ್ ಮಾಜಿ ಅಧ್ಯಕ್ಷ ರಾಮನಗರ
ವಿದ್ಯುತ್ ದರ ಏರಿಕೆಯು ರೇಷ್ಮೆ ಉದ್ಯಮಕ್ಕೆ ಹೊಡೆತ ಕೊಡಲಿದ್ದು ನಮಗೆ ವಿನಾಯಿತಿ ಕೊಡಬೇಕು. ಕೆಎಸ್‌ಐಸಿ ರೇಷ್ಮೆಯನ್ನು ನಿಯಮಿತವಾಗಿ ‌ ಖರೀದಿಸಬೇಕು. ರಾಮನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರಿಸದೆ ಇಲ್ಲೇ ಉಳಿಸಬೇಕು. ರೇಷ್ಮೆ ಕೊಡುತ್ತಿದ್ದ ಸಬ್ಸಿಡಿ ಪುನರಾರಂಭಿಸಬೇಕು. ರೇಷ್ಮೆ ಇಳುವರಿ ಆಧರಿಸಿ ಬೆಲೆ ನಿಗದಿ ಮಾಡಲು ವೈಜ್ಞಾನಿಕ ಮಾನದಂಡಗಳನ್ನು ಘೋಷಿಸಬೇಕು.
– ಶ್ರೀನಿವಾಸ್ ವಿ, ಉಪಾಧ್ಯಕ್ಷ ‌ರೀಲರ್ಸ್ ಅಸೋಸಿಯೇಷನ್ ರಾಮನಗರ
ರೇಷ್ಮೆ ಉದ್ಯಮ ಸ್ಥಾಪನೆಗೆ ವಿಶೇಷ ಒತ್ತು ನೀಡಲು ಉದ್ಯಮಿಗಳಿಗೆ ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ ಒದಗಿಸಬೇಕು. ಸ್ವಯಂಚಾಲಿನ ರೀಲಿಂಗ್ ಯಂತ್ರಗಳ ಮೇಲೆ ವಿಧಿಸಿರುವ ಶೇ 18ರಷ್ಟು ಜಿಎಸ್‌ಟಿ ರದ್ದುಪಡಿಸಬೇಕು.  ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕು. ಬೆಂಗಳೂರಿನ ಕೈಗಾರಿಕೆಗಳನ್ನು ರಾಮನಗರಕ್ಕೆ ಸ್ಥಳಾಂತರಿಸಿ ಅಲ್ಲಿನ ಒತ್ತಡ ತಗ್ಗಿಸಬೇಕು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ರೇಷ್ಮೆ ರಫ್ತು ಉತ್ತೇಜನಕ್ಕೆ ಆದ್ಯತೆ ನೀಡಬೇಕು. ರೀಲರ್ಸ್ ಪಾರ್ಕ್ ನಿಮಿಸಬೇಕು.
– ಜನಾರ್ಧನ, ಕಾರ್ಯಾಧ್ಯಕ್ಷ ರಾಮನಗರ ಜಿಲ್ಲಾ ದಲಿತ ಉದ್ಯಮಿಗಳ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT