ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಜಲಾಶಯ; ಎಡದಂಡೆ ಕಾಲುವೆಗೆ ನೀರು ಸೋರಿಕೆ?

ಟೆಂಡರ್ ಹಂತದಲ್ಲಿಯೇ ಸ್ಥಗಿತಗೊಂಡಿದೆ ದುರಸ್ತಿ ಕಾರ್ಯ
Published : 12 ಆಗಸ್ಟ್ 2024, 0:10 IST
Last Updated : 12 ಆಗಸ್ಟ್ 2024, 0:10 IST
ಫಾಲೋ ಮಾಡಿ
Comments
ಭದ್ರಾ ಜಲಾಶಯದ ನೋಟ
ಭದ್ರಾ ಜಲಾಶಯದ ನೋಟ
ನಾಲ್ಕು ದಿನಗಳಲ್ಲಿ ಸ್ಲುಸ್ ಗೇಟ್ ದುರಸ್ತಿ
ಹೊಸಪೇಟೆಯ ತುಂಗಭದ್ರಾ ಜಲಾಶಯ ತುಂಬಿದ ನಂತರ ಗೇಟ್ ಕಿತ್ತುಹೋಗಿದ್ದರೆ ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲುಸ್ ಗೇಟ್‌ ಎರಡು ತಿಂಗಳ ಹಿಂದೆ ಜಲಾಶಯದಲ್ಲಿ ಶೇ 30ರಷ್ಟು ನೀರಿದ್ದಾಗ ಕ್ಯಾಲ್ಸಿನೇಶನ್‌ ಸಮಸ್ಯೆಯಿಂದ ಕಿತ್ತು ಹೋಗಿತ್ತು. ಇದರಿಂದ ನಾಲ್ಕು ದಿನಗಳಲ್ಲಿ 0.34 ಟಿಎಂಸಿ ಅಡಿ ನೀರು ನದಿಗೆ ಹರಿದಿತ್ತು. ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮುಳುಗು ತಜ್ಞರ ನೆರವಿನಿಂದ ನೀರಿನ ಆಳದಲ್ಲಿ ಕಾರ್ಯಾಚರಣೆ ನಡೆಸಿ ಗೇಟ್ ದುರಸ್ತಿ ಮಾಡಿದ್ದರು. ಭದ್ರಾ ಜಲಾಶಯದ ಸುರಕ್ಷೆಗೆ ಕರ್ನಾಟಕ ನೀರಾವರಿ ನಿಗಮವು ಕೇಂದ್ರೀಯ ಜಲ ಆಯೋಗದ (ಸಿಡಬ್ಲ್ಯುಸಿ) ಅಧೀನದ ಜಲಾಶಯಗಳ ಪುನರುತ್ಥಾನ ಹಾಗೂ ಅಭಿವೃದ್ಧಿ ಯೋಜನೆ (Dam Rehabitaton and Improvement Project–Drip) ಅಡಿ ತಾಂತ್ರಿಕ ಹಾಗೂ ಆರ್ಥಿಕ ನೆರವು ಕೋರಿದೆ. ಇದಕ್ಕಾಗಿ ₹ 100 ಕೋಟಿ ಮೊತ್ತದ ಯೋಜನಾ ವರದಿ ಕೂಡ ಸಿದ್ಧಪಡಿಸಿ ಕಳುಹಿಸಿದೆ.
ತುಂಗಾ ಜಲಾಶಯ: ವೈ ರೋಪ್‌ನಲ್ಲಿ ದೋಷ
ಗಾಜನೂರಿನ ತುಂಗಾ ಜಲಾಶಯದ 22 ಗೇಟ್‌ಗಳ ಪೈಕಿ ಎಂಟನೇ ಸಂಖ್ಯೆಯ ಗೇಟ್‌ನ ವೈ ರೋಪ್‌ನಲ್ಲಿ (ಗೇಟ್ ಎತ್ತುವ ಉಕ್ಕಿನ ಹಗ್ಗ) ಡ್ಯಾಮೇಜ್ ಕಾಣಿಸಿಕೊಂಡಿದೆ. ಹೀಗಾಗಿ ಜಲಾಶಯದ 21 ಗೇಟ್‌ಗಳನ್ನು ಮಾತ್ರ ತೆರೆದು ನದಿಗೆ ನೀರು ಹರಿಸಲಾಗಿದೆ. ‘ಗೇಟ್‌ನ ವೈ ರೋಪ್‌ ದುರಸ್ತಿಗೆ ಈಗಾಗಲೇ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಈ ಬಾರಿ ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ಅದರ ದುರಸ್ತಿ ಕಾರ್ಯ 15ರಿಂದ 20 ದಿನಗಳಲ್ಲಿ ಮುಗಿಸಲಿದ್ದೇವೆ’ ಎಂದು ತುಂಗಾ ಜಲಾಶಯ ಯೋಜನಾ ವಿಭಾಗದ ಎಂಜಿನಿಯರ್ ತಿಪ್ಪಾನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಕಾರ್ಗಲ್‌ನ ಲಿಂಗನಮಕ್ಕಿ ಹೊಸನಗರ ತಾಲ್ಲೂಕಿನ ಮಾಣಿ ಸಾವೇಹಕ್ಲು ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT