ಕೆರೆಯ ಸುತ್ತಲೂ ಫುಟ್‌ಪಾತ್ ನಿರ್ಮಿಸಿ
ಅನತಿ ದೂರದಲ್ಲಿ ಹರಿದು ಹೋಗಿರುವ ದಂಡಾವತಿ ನದಿಗೆ ಅಡ್ಡಲಾಗಿ ಏತ ನೀರಾವರಿ ಯೋಜನೆ ರೂಪಿಸಿ ಕೆರೆಗೆ ನೀರು ತುಂಬಿಸುವ ಮಹತ್ವದ ಕಾರ್ಯ ಕೈಗೊಂಡರೆ ಬಿಳಾಗಿ ಕೆರೆಯಲ್ಲಿ ಪಕ್ಷಿಗಳು ಶಾಶ್ವತವಾಗಿ ನೆಲೆಸುವಂತೆ ನೋಡಿಕೊಳ್ಳಬಹುದಾಗಿದೆ. ಸರ್ವಋತು ಪಕ್ಷಿಧಾಮವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ. ‘ಪಕ್ಷಿಗಳಿಗೆ ಆಹಾರ ಕೊರತೆ ಎದುರಾಗದಂತೆ ಕೆರೆಯಲ್ಲಿ ಮೀನು ಮರಿಗಳನ್ನು ಬಿಡಬೇಕು. ಕೆರೆಯ ಸುತ್ತಲೂ ಪಕ್ಷಿಗಳ ವೀಕ್ಷಣೆಗೆ ಫುಟ್‌ಪಾತ್ ನಿರ್ಮಿಸಿ ಬಿದಿರು ಮತ್ತಿತರ ಎತ್ತರದ ಸಸ್ಯ ಪ್ರಬೇಧವನ್ನು ಬೆಳೆಸಿದರೆ ನೂರಾರು ಬಗೆಯ ಪಕ್ಷಿಗಳು ಗೂಡು ಕಟ್ಟಿಕೊಂಡು ಪಕ್ಷಿಪ್ರಿಯರ ಕೌತುಕವನ್ನು ತಣಿಸಬಲ್ಲವು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಪಕ್ಷಿ ಪ್ರೇಮಿಗಳು ಒತ್ತಾಯಿಸುತ್ತಾರೆ.