ತುಮರಿ: ಸಾಗರ ತಾಲ್ಲೂಕಿನ ಕಳಸವಳ್ಳಿ ಗ್ರಾಮದ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರು ಯುವಕರ ಮೃತದೇಹಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿವೆ.

ಕಳಸವಳ್ಳಿ ಗ್ರಾಮದ ಚೇತನ್ ಜೈನ್ (28), ಹುಲಿದೇವರ ಬನ ಗ್ರಾಮದ ಸಂದೀಪ್ ಭಟ್ (31) ಹಾಗೂ ಗಿಣಿವಾರ ಗ್ರಾಮದ ರಾಜು (27) ಮೃತಪಟ್ಟವರು. ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಹಿನ್ನೀರಿನ 40 ಅಡಿ ಆಳದಿಂದ ಶವಗಳನ್ನು ಹೊರತೆಗೆದಿದೆ. ತೆಪ್ಪದ ಮೂಲಕ ನಡುಗಡ್ಡೆಗೆ ಹೊಳೆ ಊಟಕ್ಕೆಂದು ಬುಧವಾರ ಐವರು ಯುವಕರು ತೆರಳುತ್ತಿದ್ದರು. ಆಗ ದುರ್ಘಟನೆ ನಡೆದಿತ್ತು. ವಿನಯ್ ಹಾಗೂ ಯಶವಂತ್ ಎಂಬುವವರು ಈಜಿ ದಡ ಸೇರಿದ್ದರು.

ಮೂವರ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಬುಧವಾರ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ್ದವು. ಕಗ್ಗತ್ತಲು ಕವಿದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಗುರುವಾರ ಬೆಳಿಗ್ಗೆ 6ರಿಂದ 8 ಗಂಟೆ ಗಳವರೆಗೆ ಕಾರ್ಯಾಚರಣೆ ಮುಂದುವರಿಸಲಾಗಿತ್ತು.

ಆವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೃಥ್ವಿರಾಜ್ ನೇತೃತ್ವದಲ್ಲಿ ಕಳಸವಳ್ಳಿಯ ಹಿನ್ನೀರ ತಟದಲ್ಲಿಯೇ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಸ್ಥಳಕ್ಕೆ ಕಾರ್ಗಲ್ ಪೊಲೀಸ್ ಠಾಣೆ ಪಿಎಸ್ಐ ಹೊಳೆಬಸಪ್ಪ ಹೋಳಿ ಹಾಗೂ ಸಿಬ್ಬಂದಿ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ, ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಗೌಡ ಭೇಟಿ ನೀಡಿದ್ದರು.

ಕುಟುಂಬಸ್ಥರ ಆಕ್ರಂದನ: ಕಳಸವಳ್ಳಿ ಹಾಗೂ ಹುಲಿದೇವರ ಬನ ಗ್ರಾಮಗಳು ಶೋಕಸಾಗರದಲ್ಲಿ ಮುಳುಗಿವೆ. ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುವಂತಾಗಿದೆ. ಯುವಕರ ಗ್ರಾಮಗಳಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಪುತ್ರರನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ನಡುಗಡ್ಡೆ ಊಟ ತಂದ ಆಪತ್ತು: ಶರಾವತಿ ಹಿನ್ನೀರಿನ ಹಲವು ಭಾಗಗಳಲ್ಲಿ ಯುವಕರು ನಡುಗಡ್ಡೆ ಊಟಕ್ಕೆ ತೆರಳುವುದು ಸಾಮಾನ್ಯವಾಗಿದೆ. ಇದು ಗ್ರಾಮಸ್ಥರಲ್ಲಿ ಆತಂಕ ತಂದಿದೆ. ತೆಪ್ಪದ ಮೂಲಕ ಜನ ಸಂಚಾರವಿಲ್ಲದ ದ್ವೀಪ ಪ್ರದೇಶಕ್ಕೆ ಮೋಜು, ಮಸ್ತಿಗೆ ತೆರಳುವುದರಿಂದ ನಿರ್ಜನ ಪ್ರದೇಶದಲ್ಲಿ ಯಾವುದೇ ಅವಘಡ ಸಂಭವಿಸಿದರೂ ತಿಳಿಯುವುದಿಲ್ಲ. ಯುವಕರು ಹುಚ್ಚು ಸಾಹಸದಿಂದ ಅಪಾಯವನ್ನು ಲೆಕ್ಕಿಸದೇ ತೆಪ್ಪದಲ್ಲಿ ಹೋಗಿರುವುದು ಘಟನೆಗೆ ಕಾರಣ ಎಂದು ಗ್ರಾಮಸ್ಥರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.