ಶಿವಮೊಗ್ಗದಲ್ಲಿ ಗುರುವಾರ ನಡೆದ ಮ್ಯೂಚುವಲ್ ಫಂಡ್ಸ್ ಬಗ್ಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಆಸಕ್ತರು
ಶಿವಮೊಗ್ಗದಲ್ಲಿ ಗುರುವಾರ ನಡೆದ ಮ್ಯೂಚುವಲ್ ಫಂಡ್ಸ್ ಬಗ್ಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಆಸಕ್ತರು
ಮೊದಲಿನಿಂದಲೂ ಹೂಡಿಕೆ ಮೇಲೆ ಆಸಕ್ತಿ ಇದೆ. ಈ ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದಕ್ಕೆ ದೇಶದ ಬೇರೆ ಬೇರೆ ಹೂಡಿಕೆ ವಲಯಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ಸ್ ಹೆಚ್ಚು ಲಾಭದಾಯಕ ಹಾಗೂ ಸುರಕ್ಷಿತ ಎಂಬುದು ಮನದಟ್ಟಾಯಿತು.
–ಡಿ.ಮಂಜುನಾಥ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಎಂಸಿಎ ಓದಿದ್ದೇನೆ. ಹೀಗಾಗಿ ನನಗೆ ಮೊದಲಿನಿಂದಲೂ ಹೂಡಿಕೆಯ ಬಗ್ಗೆ ಹೆಚ್ಚು ಆಸಕ್ತಿ. ಬೇರೆ ಬೇರೆ ವಲಯದಲ್ಲಿ ಹೂಡಿಕೆ ಕೂಡ ಮಾಡಿದ್ದೇನೆ. ಈ ಕಾರ್ಯಾಗಾರದಿಂದ ಮ್ಯುಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಬಗ್ಗೆ ಇನ್ನಷ್ಟು ಸ್ಪಷ್ಟತೆ ದೊರೆಯಿತು.
–ಬಿ.ಎಂ.ಸವಿತಾ, ಕೃಷಿ ನಗರದ ನಿವಾಸಿ ಶಿವಮೊಗ್ಗ
ಮ್ಯೂಚುವಲ್ ಫಂಡ್ಸ್‌ಗಳ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಇಂದು ಅದರ ಚಿತ್ರಣ ಸಿಕ್ಕಿತು. ಮಾಹಿತಿ ಕೊರತೆಯಿಂದ ನಮ್ಮಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು.
– ಕೋಟೆ ಮಂಜುನಾಥ್, ಶಿವಮೊಗ್ಗ
ನಮ್ಮಲ್ಲಿ ಬಹಳಷ್ಟು ಜನರಿಗೆ ಷೇರು ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ಇದ್ದರೂ ಅದರಲ್ಲಿನ ನಷ್ಟದ ಭೀತಿಯ ಕಾರಣಕ್ಕೆ ಹಿಂಜರಿಯುತ್ತೇವೆ. ಈ ಕಾರ್ಯಾಗಾರ ಹಿಂಜರಿಕೆ ದೂರ ಮಾಡಿತು. ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಬಂದಿದ್ದೇನೆ.
–ವಿ.ಶಾಂತಾ, ಬೆಂಗಳೂರು
‘ಪ್ರಜಾವಾಣಿ’ ‘ಡೆಕ್ಕನ್‌ಹೆರಾಲ್ಡ್ ಬಳಗದಿಂದ ಅತ್ಯುತ್ತಮ ಕಾರ್ಯಾಗಾರ ಆಯೋಜನೆ ಮಾಡಲಾಗಿದೆ. ಐದು ದಶಕಗಳಿಂದ ಪತ್ರಿಕೆ ಓದುತ್ತಿದ್ದೇನೆ. ಖಂಡಿತಾ ಇದೊಂದು ಅರ್ಥಪೂರ್ಣ ಕಾರ್ಯಕ್ರಮ.
– ಸಂಚಾರಿ ನಾಗೇಶ್, ಶಿವಮೊಗ್ಗ
ಶಿವಮೊಗ್ಗದಲ್ಲಿ ಗುರುವಾರ ನಡೆದ ಮ್ಯೂಚುವಲ್ ಫಂಡ್ಸ್ ಬಗ್ಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಆಸಕ್ತರು